Breaking News

ಕಿವಿ ನೋವಿಗೆ ಇಲ್ಲಿದೆ ಪರಿಹಾರ


ಬೆಳ್ಳುಳ್ಳಿ: 1/4 ಗ್ಲಾಸ್ ಸಾಸಿವೆ ಎಣ್ಣೆಗೆ 6-7 ಬೆಳ್ಳುಳ್ಳಿ ಎಸಳನ್ನು ಹಾಕಿ ಅದು ಬೆಳ್ಳುಳ್ಳಿ ಗಾಢ ಕಂದು ಬಣ್ಣ ಬರುವವರೆಗೆ ಕಾಯಿಸಬೇಕು. ನಂತರ ಆ ಎಣ್ಣೆಯನ್ನು ಚೆನ್ನಾಗಿ ಸೋಸಿ ಒಂದು ಪುಟ್ಟ ಡಬ್ಬದಲ್ಲಿ ಶೇಖರಿಸಿಟ್ಟು ದಿನಕ್ಕೆ ಎರಡು ಬಾರಿ ಕಿವಿಗೆ ಹಾಕಬೇಕು. ಈ ರೀತಿ ಮಾಡಿದರೆ ಆಗಾಗ ಬರುವ ಕಿವಿನೋವು ಕಡಿಮೆಯಾಗುತ್ತದೆ.
ಬಾದಾಮಿ ಎಣ್ಣೆ: ಚಮಚವನ್ನು ಬಿಸಿ ನೀರಿನಲ್ಲಿಟ್ಟು ಬಿಸಿ ಮಾಡಿ ಅದಕ್ಕೆ ಬಾದಾಮಿ ಎಣ್ಣೆಯನ್ನು ಹಾಕಿ ಕಿವಿಗೆ ಹಾಕಿದರೆ ಕಿವಿನೋವು ಕಡಿಮೆಯಾಗುತ್ತದೆ.
ವಿಟಮಿನ್ ಸಿ : ಆಹಾರದಲ್ಲಿ ಸತು ಮತ್ತು ವಿಟಮಿನ್ ಸಿ ಇರುವ ಅಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಿವಿ ಸಂಬಂಧಿತ ಕಾಯಿಲೆ ಬರದಂತೆ ತಡೆಯಬಹುದು.

ಗಜ ನಿಂಬೆ ಹಣ್ಣಿನ  ರಸದಲ್ಲಿ  ಸ್ವಲ್ಪ  ತುಪ್ಪ  ಬೆರೆಸಿ  ಕಾಯಿಸಿ  ಬೆಚ್ಚಗಿನ  ರಸವನ್ನು  ಕಿವಿಗೆ  ಹಾಕಿದರೆ  ಕಿವಿ ನೋವ್ವು  ಗುಣವಾಗುತ್ತದೆ.

ಹುಣಿಸೆ  ಮರದ  ಚಿಗುರೆಲೆಗಳನ್ನು  ಎಳ್ಳೆಣ್ಣೆ ಯಲ್ಲಿ  ಹಾಕಿ  ಕಾಯಿಸಿ  ಎಣ್ಣೆಯನ್ನು  ಸ್ವಲ್ಪ  ಬೆಚ್ಚಗಿರುವಾಗ  ಕಿವಿಗಳಿಗೆ  1-2 ತೊಟ್ಟು  ಹಾಕಿದರೆ  ಕಿವಿ  ನೋವ್ವು  ಗುಣವಾಗುತ್ತದೆ.

loading...

No comments