ನನ್ನ ಸಾವಿನ ಬಳಿಕ ಅಭಿಷೇಕ್ ಮತ್ತು ಶ್ವೇತಾಗೆ ಸಮಾನ ಪಾಲು
ನವದೆಹಲಿ :“ನನ್ನ ಸಾವಿನ ನಂತರ ನನಗೆ ಸೇರಿದ ಆಸ್ತಿಯನ್ನು ಪುತ್ರ ಅಭಿಷೇಕ್ ಮತ್ತು ಪುತ್ರಿ ಶ್ವೇತಾ ನಂದಾಗೆ ಸಮಾನವಾಗಿ ಹಂಚಿಕೆಯಾಗಬೇಕು” ಎಂಬ ಕಾರ್ಡ್ ಹಿಡಿದ ಫೋಟೋವನ್ನು ಅಮಿತಾಭ್ ಟ್ವೀಟ್ ಮಾಡಿದ್ದಾರೆ.
ವಿಶ್ವಾದ್ಯಂತ ಲಿಂಗ ತಾರತಮ್ಯದ ವಿರುದ್ಧ ಮತ್ತು ಗಂಡು-ಹೆಣ್ಣಿನ ನಡುವಿನ ಅಂತರವನ್ನು ಕೊನೆಗೊಳಿಸಿ ಸಮಾನ ಅವಕಾಶ ಅವಕಾಶ ನೀಡಬೇಕು ಎಂಬ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಲಿಂಗ ಸಮಾನತೆ ಬಗ್ಗೆ ಪ್ರತಿಪಾದಿಸಿರುವ ಅಮಿತಾಭ್ ತಮ್ಮ ಆಸ್ತಿಯಲ್ಲಿ ಪುತ್ರಿ ಶ್ವೇತಾ ನಂದಾ ಮತ್ತು ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಸಮಾನವಾಗಿ ಹಂಚುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಾಲಿವುಡ್ ಹಿರಿಯ ನಟ “ನಾವೆಲ್ಲರೂ ಸಮಾನರು, ಲಿಂಗ ಅಸಮಾನತೆಯನ್ನು ತೊಡೆದುಹಾಕಬೇಕು” ಎಂದು ಕರೆನೀಡಿದ್ದಾರೆ. ಪಿತೃಪ್ರಧಾನ ಕುಟುಂಬವೇ ಹೆಚ್ಚಾಗಿರುವ ಭಾರತದಲ್ಲಿ ತಂದೆಯ ಸಂಪೂರ್ಣ ಆಸ್ತಿ ಆತನ ಪುತ್ರನಿಗೆ ವರ್ಗಾವಣೆಯಾಗುವ ಹಿನ್ನೆಲೆಯಲ್ಲಿ ಬಿಗ್ ಬಿ ಪೋಸ್ಟ್ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.
loading...
No comments