Breaking News

ಸಿಪಿಎಂ ಕಚೇರಿಗೆ ಬೆಂಕಿ : ಆರ್‌ಎಸ್‌ಎಸ್ ಕಚೇರಿ ಮೇಲಿನ ದಾಳಿಗೆ ಪ್ರತೀಕಾರ ?


ಸಿಪಿಎಂ ಕಾರ್ಯಕರ್ತನ ಕೊಲೆ

ಕೊಚ್ಚಿ :ಕೇರಳದಲ್ಲಿ ಆರ್‌ಎಸ್‌ಎಸ್ ಮತ್ತು ಕಮ್ಯುನಿಸ್ಟರ ಮಧ್ಯೆ ನಡೆಯುತ್ತಿರುವ ಹಿಂಸಾತ್ಮಕ ದಾಳಿಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತೀಕಾರದ ಕಿಚ್ಚು ಮತ್ತಷ್ಟು ಉಲ್ಬಣಗೊಂಡಿದೆ.

ಆರ್‌ಎಸ್‌ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆದ ಬೆನ್ನಲ್ಲೇ ಪ್ರತೀಕಾರವಾಗಿ ಕಲ್ಲಿಕೋಟೆಯಲ್ಲಿ ಸಿಪಿಎಂ ಕಚೇರಿಗೆ ಇಂದು ಬೆಂಕಿ ಹಚ್ಚಲಾಗಿದೆ. ಈ ನಡುವೆ ಕೇರಳದ ಪಾಲಕ್ಕಾಡ್‌‌ನಲ್ಲಿ ಸಿಪಿಎಂ ಕಾರ್ಯಕರ್ತರೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಮೂವರು ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಆರ್‌ಎಸ್‌ಎಸ್ ಕಚೇರಿ ಮೇಲೆ ನಿನ್ನೆ ನಡೆದ ದಾಳಿಯಲ್ಲಿ ನಾಲ್ಕು ಮಂದಿ ಬಿಜೆಪಿ ಕಾರ್ಯಕರ್ತರು ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಸಂಘಪರಿವಾರದ ಕಾರ್ಯಕರ್ತರು ಕಲ್ಲಿಕೋಟೆಯ ಸಿಪಿಎಂ ಕಚೇರಿ ಮೇಲೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ

loading...

No comments