ಸುಟ್ಟ ಗಾಯಕ್ಕೆ ಮನೆ ಮದ್ದು
ಸುಟ್ಟ ಗಾಯಕ್ಕೆ ತಕ್ಷಣ ಮಾಡುವಂತದ್ದು :
ಹರಿಯುವ ನೀರು: ಸುಟ್ಟುಕೊಂಡ ತಕ್ಷಣ ನಲ್ಲಿಯಲ್ಲಿ ನೀರನ್ನು ಹರೆಯ ಬಿಟ್ಟು ಅದರಲ್ಲಿ ಸುಟ್ಟುಕೊಂಡ ಭಾಗವನ್ನು ಹಿಡಿಯಬೇಕು. ಈ ರೀತಿ 10 ನಿಮಿಷ ಹಿಡಿದು ನಂತರ ಐಸ್ ನಿಂದ ಮೆಲ್ಲನೆ ಉಜ್ಜಬೇಕು. ಗಾಯ ಒಣಗುವವರೆಗೆ 8-10 ಗ್ಲಾಸ್ ನೀರನ್ನು ಕಡ್ಡಾಯವಾಗಿ ಸೇವಿಸಬೇಕು.
ಜೇನು: ತಣ್ಣೀರಿನಲ್ಲಿ ಗಾಯವನ್ನು ಹಿಡಿದ ನಂತರ ಆ ಭಾಗಕ್ಕೆ ಸ್ವಲ್ಪ ಜೇನು ಹಾಕಿ. ಇದರಿಂದ ಗಾಯಕ್ಕೆ ಸೋಂಕು ಆಗುವುದಿಲ್ಲ.
ಹಣ್ಣುಗಳು: ಟೊಮೆಟೊ, ಚೆರ್ರಿ, ದ್ರಾಕ್ಷಿ ಹೀಗೆ antioxidants ಜಾಸ್ತಿ ಇರುವ ಹಣ್ಣುಗಳನ್ನು ಸೇವಿಸಿದರೆ ಗಾಯ ಬೇಗನೆ ಗುಣಮುಖವಾಗುವುದು.
ಅರಿಶಿಣ: ರಾತ್ರಿ ಮಲಗುವಾಗ ಹಾಲನ್ನು ಬಿಸಿ ಮಡಿ ಅದರಲ್ಲಿ ಅರಿಶಿಣವನ್ನು ಕರಗಿಸಿ ಅದನ್ನು ಹಚ್ಚಿದರೆ ಗಾಯ ಗುಣವಾಗುತ್ತೆ. ಉಪ್ಪು: ಬಿಸಿಯಾದ ಆಹಾರವನ್ನು ಬಾಯಿಗೆ ಹಾಕಿದರೆ ಬಾಯಿ ನಾಲಗೆ ಸುಟ್ಟು ಹೋಗುತ್ತದೆ. ಆಗ ಉಪ್ಪನ್ನು ಸ್ವಲ್ಪ ಬಿಸಿ ನೀರಿಗೆ ಹಾಕಿ ಅದರಿಂದ ಬಾಯಿ ಮುಕ್ಕಳಿಸಬೇಕು.
ಲ್ಯಾವೆಂಡರ್ ಎಣ್ಣೆ: ಸುಟ್ಟ ಗಾಯ ಒಣಗಿದ ಮೇಲೆ ಕಲೆಗಳು ಹೋಗಲು ಲ್ಯಾವೆಂಡರ್ ಎಣ್ಣೆಯನ್ನು ಹಚ್ಚಿ.
ಆಲೂಗೆಡ್ಡೆ: ಗಾಯವಾದ ತಕ್ಷಣ ಬೇಯಿಸಿದ ಆಲೂಗೆಡ್ಡೆಯನ್ನು ಪೇಸ್ಟ್ ಮಾಡಿ ಸುಟ್ಟ ಭಾಗಕ್ಕೆ ಹಚ್ಚಿದರೆ ಸೋಂಕು ಆಗುವುದನ್ನು ತಡೆಯುತ್ತದೆ.
ಲೋಳೆಸರ:ಸುಟ್ಟ ಜಾಗದಲ್ಲಿ ದಿನಕ್ಕೆ 2-3 ಬಾರಿ ಲೋಳೆಸರ ಹಚ್ಚಿಕೊಂಡರೆ ಗಾಯ ಬೇಗನೆ ಗುಣಮುಖವಾಗುತ್ತದೆ. ಅಲ್ಲದೆ ಕಲೆ ಕೂಡ ಕಡಿಮೆಯಾಗುವುದು.
ವಿನಿಗರ್: ನೀರಿನಲ್ಲಿ ವಿನಿಗರ್ ಮಿಶ್ರ ಮಾಡಿ ಸುಟ್ಟಕೊಂಡ ಜಾಗಕ್ಕೆ ಹಚ್ಚಿದರೆ ಗಾಯ ಬೇಗನೆ ಗುಣಮುಖವಾಗುತ್ತದೆ.
ಟೀ: ಟೀ ಗಿಡದಿಂದ ದೊರೆಯುವ ಎಣ್ಣೆಯನ್ನು ಸುಟ್ಟ ಗಾಯದ ಮೇಲೆ ಹಚ್ಚುವುದರಿಂದ ಗಾಯ ಗುಣಮುಖವಾಗುವುದು.
ಪಟಾಕಿ ಸಿಡಿದು ಉಂಟಾದ ಗಾಯಗಳಿಗೆ ಈರುಳ್ಳಿಯನ್ನು ಜಜ್ಜಿ ಕಟ್ಟುವುದರಿಂದ ನೋವು ಕಡಿಮೆಯಾಗುತ್ತದೆ.
ಸುಟ್ಟ ಗಾಯ ಉಂಟಾದಾಗ ಬಾಳೆಹಣ್ಣಿನ ಲೇಪ ಹಚ್ಚಿದರೆ ಹಿತಕರ. ಅಂತೆಯೇ ಸುಟ್ಟ ಗಾಯಕ್ಕೆ ಶುದ್ಧ ಜೇನಿನ ಲೇಪ ಹಚ್ಚುವುದೂ ಹಿತಕರ.
ಸುಟ್ಟ ಗಾಯದ ಕಲೆ ನಿವಾರಣೆಗೆ :
ಮುಲ್ತಾನಿ ಮಿಟ್ಟಿ, ರೋಸ್ ವಾಟರ್ ಮತ್ತು ನಿಂಬೆ ರಸ ಮಿಶ್ರಣ ತೆಳ್ಳಗೆ ಮಾಡಿಕೊಂಡು ಸುಟ್ಟ ಗಾಯದ ಕಲೆ ಮೇಲೆ 5-7 ನಿಮಿಷ ಹಾಗೇ ಒಣಗಲು ಬಿಡಬೇಕು. ನಂತರ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಬೇಕು. ಅದನ್ನು ಉಜ್ಜಲು ಹೋಗಬಾರದು.
ಪುದೀನಾ ಎಲೆಯನ್ನು ರುಬ್ಬಿ ತೆಳುವಾದ ಹತ್ತಿ ಬಟ್ಟೆಗೆ ಹಾಕಿ ಸುಟ್ಟ ಗಾಯದ ಮೇಲೆ ಹಿಂಡಬೇಕು. ಸುಟ್ಟುಕೊಂಡ ತಕ್ಷಣವೇ ಇದನ್ನು ಪಾಲಿಸಿದರೆ ಉರಿಯೂ ಕಡಿಮೆಯಾಗುವುದಲ್ಲದೆ ಬೊಬ್ಬೆ ಏಳುವುದೂ ನಿಲ್ಲುತ್ತದೆ. ಕಲೆಯೂ ಉಳಿಯುವುದಿಲ್ಲ.
ಸುಟ್ಟ ಗಾಯಕ್ಕೆ ಕೊಬ್ಬರಿ ಎಣ್ಣೆ ಲೇಪಿಸುವುದು ಅನಾದಿ ಕಾಲದಿಂದಲೂ ನಡೆದುಬಂದಿದೆ. ದಿನಕ್ಕೆ ನಾಲ್ಕು ಬಾರಿಯಾದರೂ ಸುಟ್ಟ ಗಾಯಕ್ಕೆ ಎಣ್ಣೆ ಹಚ್ಚುತ್ತಾ ಬಂದರೆ ಕೆಲವೇ ವಾರಗಳಲ್ಲಿ ಚರ್ಮದ ಬಣ್ಣ ಮೊದಲಿನಂತಾಗುತ್ತದೆ.
ಲೋಳೆರಸ ಎಲ್ಲ ರೀತಿಯ ಚರ್ಮ ರೋಗಗಳಿಗೂ ಪರಿಹಾರ ನೀಡುತ್ತೆ. ಆದ್ದರಿಂದ ಸುಟ್ಟ ಗಾಯದ ಮೇಲೆ ಲೋಳೆರಸ ಲೇಪಿಸುವುದರಿಂದ ಉರಿ ಕಡಿಮೆಗೊಳಿಸಿ ಮೊದಲಿನ ಬಣ್ಣ ತಂದುಕೊಡುತ್ತದೆ.
ಸುಟ್ಟು ಕೊಂಡ ಕೆಲವೇ ಕ್ಷಣಗಳಲ್ಲಿ ಅಡುಗೆ ಸೋಡವನ್ನು ಹಚ್ಚುವುದರಿಂದ ಬೊಬ್ಬೆ ಇಲ್ಲದಂತಾಗಿ ಗಾಯ ಬೇಗ ವಾಸಿಯಾಗುತ್ತದೆ.
ಎಲ್ಲ ರೀತಿಯ ಚರ್ಮ ರೋಗಗಳನ್ನು ವಾಸಿ ಮಾಡುವ ಗುಣವಿರುವ ವಿಟಮಿನ್ ಕೆ ಇರುವ ತರಕಾರಿಗಳನ್ನು ಉಪಯೋಗಿಸುವುದರಿಂದ ಸುಟ್ಟ ಗಾಯ ಬೇಗ ಮಾಯವಾಗಿ ಕಲೆಯೂ ಉಳಿಯದಂತೆ ಮಾಡುತ್ತದೆ. ತರಕಾರಿಯ ರಸವನ್ನು ಇದರ ಮೇಲೆ ಲೇಪಿಸಿದರೆ ಅಥವಾ ಹಸಿರು ತರಕಾರಿಗಳ ಸೇವನೆಯಿಂದಲೂ ಸುಟ್ಟ ಗಾಯದ ಕಲೆ ಇಲ್ಲದಂತೆ ಮಾಡಬಹುದು.
loading...
No comments