Breaking News

ಸಾಕ್ಷಿ ಹೇಳಲು ಬಂದವನಿಗೆ ನ್ಯಾಯಾಲಯ ಆವರಣದಲ್ಲೇ ಕೊಲೆ ಬೆದರಿಕೆ!

file photo

ಮಂಗಳೂರು, ಮಾ.೩- ವಿಟ್ಲದಲ್ಲಿ ೨೦೧೫ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ಆಗಮಿಸಿದ್ದ ವ್ಯಕ್ತಿಗೆ ಕೊಲೆ ಬೆದರಿಕೆಯೊಡ್ಡಿದ ಘಟನೆ ಗುರುವಾರ ಸಂಭವಿಸಿದೆ.

ವಿಟ್ಲದಲ್ಲಿ ೨೦೧೫ರಲ್ಲಿ ಆಸಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹೇಳಲು ಆಗಮಿಸಿದ್ದ ಮಂಜೇಶ್ವರ ಉಪ್ಪಳ ನಿವಾಸಿ ಅಬೂಬಕ್ಕರ್ ರಿಯಾಜ್ ಅವರನ್ನು ಅಡ್ಡಗಟ್ಟಿದ ನಪಾಟ ರಫೀಕ್ ಮತ್ತು ಪದ್ಮನಾಭ ಅವರ ಸಹಚರರಾದ ಪ್ರಭಾಕರ, ಹಮೀದ್, ನೂರ್ ಷಾ ಮತ್ತು ಜಂಶೀರ್ ಅವರು ನ್ಯಾಯಾಲಯದ ಆವರಣದಲ್ಲಿ ಅಬೂಬಕ್ಕರ್ ಅವರನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಆರೋಪಿಗಳು ನಪಾಟ ರಫೀಕ್ ಮತ್ತು ಪದ್ಮನಾಭ ಅವರನ್ನು ನೋಡಲು ನ್ಯಾಯಾಲಯಕ್ಕೆ ಬಂದಿದ್ದರು.

ನಪಾಟ ರಫೀಕ್ ಹಾಗೂ ಪದ್ಮನಾಭ ಮಂಗಳೂರು ಕಾರಾಗೃಹದಲ್ಲಿ ಬೆದರಿಕೆಯೊಡ್ಡಿದ ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ಬಂದರು ಪೊಲೀಸ್ ಠಾಣೆಗೆ ಹಾಜರುಪಡಿಸಿದ್ದಾರೆ. ಬಂದರು ಠಾಣೆಯ ಇನ್ಸ್ ಸ್ಪೆಕ್ಟರ್ ಶಾಂತಾರಾಮ ಅವರು ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ. 
loading...

No comments