Breaking News

ಜೆ.ಎನ್.ಯು ಆವರಣದಲ್ಲಿ ಮತ್ತೆ ಕಾಣಿಸಿದೆ ದೇಶದ್ರೋಹಿ ಭಿತ್ತಿಪತ್ರಗಳು.

ನವದೆಹಲಿ : ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಎಬಿವಿಪಿ ಮತ್ತು ಎಐಎಸ್ಎ ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ನಡೆದ ಘರ್ಷಣೆಯ ಕಾವು ತಣ್ಣಗಾಗುವ ಮೊದಲೇ ಜವಾಹರಲಾಲ ನೆಹರು ವಿಶ್ವವಿದ್ಯಾನಿಲಯದಲ್ಲಿ ಮತ್ತೆ ದೇಶ ವಿರೋಧಿ ಭಿತ್ತಿಪತ್ರಗಳು ಕಾಣಿಸಿಕೊಂಡಿವೆ
ಜೆಎನ್ಯು ನ ಸಮಾಜ ವಿಜ್ಞಾನ ಘಟಕದ ಗೋಡೆಯ ಮೇಲೆ "ಆಜಾಧಿ ಫಾರ್ ಕಾಶ್ಮೀರ್" ಭಿತ್ತಿಪತ್ರಗಳನ್ನು ಯಾರೋ ಹಚ್ಚಿದ್ದಾರೆ. ಇದನ್ನು ಗಮನಿಸಿದ ಕೆಲ ವಿದ್ಯಾರ್ಥಿಗಳು ತಕ್ಷಣ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಗೆ ವಿಷಯ ಮುಟ್ಟಿಸಿದ್ದು , ಆಡಳಿತ ಮಂಡಳಿ ವಿಶ್ವವಿದ್ಯಾನಿಲಯದ ಭದ್ರತಾದಳಕ್ಕೆ ಪೋಸ್ಟರ್ ತೆಗೆಯುವಂತೆ ಆದೇಶ ನೀಡಿದ್ದಾರೆ.
ಪೋಸ್ಟರನ್ನು ಎಡ ಪಂಥೀಯ ಡೆಮೊಕ್ರಾಟಿಕ್‌ ಸ್ಟೂಡೆಂಟ್ಸ್‌ ಯೂನಿಯನ್‌ (ಡಿಎಸ್‌ಯು) ಹೆಸರಿನಲ್ಲಿ ಅಂಟಿಸಲಾಗಿದ್ದು  "ಫ್ರೀಡಂ ಫಾರ್‌ ಕಾಶ್ಮೀರ್‌, ಫ್ರೀ ಪ್ಯಾಲೆಸ್ತೀನ್‌, ರೈಟ್‌ ಟು ಸೆಲ್ಫ್ ಡಿಟರ್ಮಿನೇಶನ್‌ ಲಾಂಗ್‌ ಲಿವ್‌" ಎಂಬ ಘೋಷಣೆಗಳನ್ನು ಬರೆಯಲಾಗಿದೆ. ಈ ಬಗ್ಗೆ ಮಾತನಾಡಿದ ವಿವಿಯ ಹಿರಿಯ ಅಧಿಕಾರಿ " ಇಂತಹ ಅನಗತ್ಯ ವಿವಾದಗಳಿಂದಾಗಿ ವಿಶ್ವವಿದ್ಯಾನಿಲಯವು ತನ್ನ ಅಮೂಲ್ಯ ಸಮಯವನ್ನು ಕಳೆದುಕೊಂಡಿದೆ. ಯಾವುದೋ ಕಿಡಿಗೇಡಿಗಳ ಗುಂಪು ಇಂತಹ ವಿವಾದಗಳನ್ನು ಸೃಷ್ಟಿಸಲು ಯತ್ನಿಸುತ್ತಿದೆ, ಕಾಲೇಜಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರವಾಗಿದೆ.ವಿವಾದಾತ್ಮಕ ಪೋಸ್ಟರ್ ತೆಗೆಯುವಂತೆ ಭದ್ರತಾ ದಳಕ್ಕೆ ಸೂಚಿಸಲಾಗಿದೆ" ಎಂದಿದ್ದಾರೆ.
loading...

No comments