ಬಾಳೆ ಎಲೆ ಉಪಯೋಗಿಸಿ ತ್ವಚೆ ರಕ್ಷಣೆ ಮಾಡಿ
1. ಚಿಕ್ಕ ಗಾಯವಾಗಿದ್ದರೆ ಬಾಳೆ ಎಲೆಯ ರಸ ಹಾಕಿದರೆ ಗುಣಮುಖವಾಗುತ್ತದೆ.
2. ಬಿಸಿಲಿನಿಂದ ತ್ವಚೆ ಕಪ್ಪಾದರೆ, ತಲೆ ಹೊಟ್ಟಿನ ಸಮಸ್ಯೆ ಇದ್ದರೆ ಇದನ್ನು ಗುಣ ಪಡಿಸುವಲ್ಲಿ ಬಾಳೆ ಎಲೆ ತುಂಬಾ ಸಹಕಾರಿಯಾಗಿದೆ. ಕುಡಿ ಬಾಳೆ ಎಲೆಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ತಲೆಗೆ ಹಚ್ಚಿ ನಂತರ ತಣ್ಣೀರಿನಿಂದ ತಲೆ ತೊಳೆದರೆ ಹೊಟ್ಟು ನಿವಾರಣೆಯಾಗುತ್ತದೆ.
3. ಈ ಬಾಳೆ ಎಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಯಾವುದಾದರೂ ಕೀಟ , ಜೇನು ನೊಣ ಅಥವಾ ಚೇಳು ಕಚ್ಚಿದಾಗ ಅಥವಾ ತ್ವಚೆಯಲ್ಲಿ ಅಲರ್ಜಿ ಉಂಟಾದರೆ ಬಾಳೆ ಎಲೆ ರಸ ಹಾಕಿದರೆ ಗುಣಮುಖವಾಗುವುದು.
4. ಬೆಲೆ ಬಾಳುವ ಸೌಂದರ್ಯವರ್ಧಕ ಕ್ರೀಮ್ ಗಳಲ್ಲಿ Allantoin ಎಂಬ ಅಂಶವಿರುತ್ತದೆ. ಇದು ತ್ವಚೆ ಸಂರಕ್ಷಣೆಗೆ ಸಹಕಾರಿಯಾಗಿದೆ. ಬಾಳೆ ಎಲೆಯಲ್ಲಿ ಕೂಡ ಈ ಅಂಶವಿರುವುದರಿಂದ ಬ್ಯಾಕ್ಟೀರಿಯಾಗಳಿಂದ ತ್ವಚೆಯನ್ನು ರಕ್ಷಿಸುವುದು.
5. ಹಸಿ ಮೆಣಸಿನ ಕಾಯಿ ಗಿಡದ ಕುಡಿ ಎಲೆ, ದೊಡ್ಡ ಪತ್ರೆ ಎಲೆ ಮತ್ತು ಬಾಳೆ ಎಲೆ ಇವುಗಳ ರಸವನ್ನು ಮಿಶ್ರ ಮಾಡಿ ಹಚ್ಚಿದರೆ ತ್ವಚೆಯಲ್ಲಿರುವ ಕಲೆ, ತುರಿಕೆ ಈ ಸಮಸ್ಯೆಗಳನ್ನು ನಿವಾರಿಸಬಹುದು.
6. ಡಯಾಫರ್ ಅಥವಾ ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.
7. ಒಂದು ಕ್ಯೂಬ್ ಐಸ್ ತೆಗೆದಕೊಂಡು ಅದನ್ನು ಬಾಳೆಯಲ್ಲಿ ಸುತ್ತಿ, ಅದರಿಂದ ಮಸಾಜ್ ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು.
8. ಬಾಳೆ ಎಲೆಯಿಂದ ತಯಾರಿಸಿದ ಔಷಧಿ ದೊರೆಯುತ್ತದೆ, ಇದನ್ನು ಪ್ರತಿ ದಿನ ಸೇವಿಸಿದರೆ ತ್ವಚೆ ಕಾಂತಿ ಹೆಚ್ಚುವುದು.
loading...
No comments