Breaking News

ಇದು ಹಿಂದೂ ರಾಷ್ಟ್ರದ ಆರಂಭವೇ ?



ನವದೆಹಲಿ: ಆದಿತ್ಯನಾಥ ಯೋಗಿ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನೇಮಿಸಿದ್ದಕ್ಕೆ  ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್. ನಾರಿಮನ್, ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ‘ಇದು ಹಿಂದೂ ರಾಷ್ಟ್ರದ ಆರಂಭವೇ’ ಎಂದು ಪ್ರಶ್ನಿಸಿದ್ದಾರೆ .
ಚುನಾವಣೆಯ ನಂತರ ಉತ್ತರ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ಉಲ್ಲೇಖಿಸಿದ ನಾರಿಮನ್, ‘ಸಂವಿಧಾನ ಆಪತ್ತಿನಲ್ಲಿದೆ. ಆದಿತ್ಯನಾಥ ಅವರ ನೇಮಕದ ಹಿಂದಿನ ಉದ್ದೇಶವನ್ನು ಕಾಣಲಾರದವರು ರಾಜಕೀಯ ಪಕ್ಷಗಳ ವಕ್ತಾರರಾಗಿರಬೇಕು ಅಥವಾ ಅವರು ತಮ್ಮ ತಲೆ ಹಾಗೂ ಕಣ್ಣುಗಳನ್ನು ಪರೀಕ್ಷೆಗೆ ಒಳಪಡಿಸಬೇಕು’ ಎಂದು ಖಾರವಾಗಿ ಹೇಳಿದರು.

‘ನಿರ್ದಿಷ್ಟ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿರುವುದರ ಹಿಂದೆ ಧಾರ್ಮಿಕ ಪ್ರಭುತ್ವ ಸ್ಥಾಪಿಸುವ ಉದ್ದೇಶವಿದೆ’ ಎಂದು ನಾರಿಮನ್ ಅವರು ಎನ್‌ಡಿಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

‘ಮುಂದೆ ಬರಲಿರುವುದನ್ನು ಎದುರಿಸುವ ಸಿದ್ಧತೆ ನಡೆಸಲು ಜನ ಇದು ಹಿಂದೂ ರಾಷ್ಟ್ರದ ಆರಂಭವೇ ಎಂಬ ಪ್ರಶ್ನೆಯನ್ನು ಪ್ರಧಾನಿಯವರಲ್ಲಿ ಕೇಳಬೇಕು’ ಎಂದು ನಾರಿಮನ್‌ ಹೇಳಿದರು.
loading...

No comments