ಲೇಖಕ ಯೋಗೀಶ್‍ಮಾಸ್ಟರ್ ಮೇಲೆ ಮಸಿ ಬಳಿದವರ ವಿರುದ್ದ ಕ್ರಮಕ್ಕೆ ಆಗ್ರಹ
ಪ್ರತಿಭಟನೆಯನ್ನು ಉದ್ದೇಶಿಸಿ ಲೇಖಕ ನಾಗಣ್ಣ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಸಮಾಜದಲ್ಲಿ ಇಂದು ಸಾಕಷ್ಟು ಸಮಸ್ಯೆಗಳಿದ್ದು, ಆ ಸಮಸ್ಯೆಗಳ ಇತ್ಯರ್ಥಕ್ಕೆ ಸಂಘಟಿತರಾಗಬೇಕಾದ ಅವಶ್ಯಕತೆ ಇದೆ ಆದರೆ ಇಂದು ಸಮಸ್ಯೆಗಳು ದೇಶದ ಸ್ಥಿತಿ-ಗತಿಗಳ ಬಗ್ಗೆ ಮಾತನಾಡುವವರ ವಿರುದ್ದ ವ್ಯವಸ್ಥಿತವಾದ ಸಮಾಜವಿರೋಧಿ ಘಟನೆಗಳನ್ನು ನಡೆಸಲಾಗುತ್ತಿದೆ ಯೋಗಿಶ್‍ಮಾಸ್ಟರ್ ಮೆಲೆ ನಡೆದ ಹಲ್ಲೆ ವೈಚಾರಿಕತೆಯ ಮೇಲೆ ನಡೆದ ಹಲ್ಲೆಯಾಗಿದೆ ರಾಜ್ಯ ಮತ್ತು ಕೆಂದ್ರ ಸರ್ಕಾರಗಳು ಈ ರೀತಿಯ ಹಲ್ಲೆಗಳು ನಡೆಯದಂತೆ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಡಿ.ವೈ.ಎಫ್.ಐ ತಾಲ್ಲೂಕು ಅಧ್ಯಕ್ಷ ಹೆಚ್.ಎಂ. ರುದ್ರೇಶ್ ಮಾತನಾಡಿ, ಕುವೆಂಪುರವರು ಸರ್ವಜನಾಂಗದ ಶಾಂತಿಯ ತೋಟವನ್ನು ತಮ್ಮ ಕವನದ ಸಾಲುಗಳ ಮೂಲಕ ನಾಡಿನ ಜನತೆಗೆ ಸೌಹಾರ್ದತೆಯನ್ನು ಬೆಳೆಸುವಂತೆ ತಿಳಿಸಿದ್ದಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್‍ರವರು ಸಂವಿಧಾನವನ್ನು ಕೊಟ್ಟಿದ್ದಾರೆ. ಆದರೆ ಇಂದು ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ನಮ್ಮ ಸಂವಿಧಾನದ ಆಶಯಗಳು ಎತ್ತ ಸಾಗುತ್ತಿವೆ ಎನ್ನುವ ರೀತಿಯಲ್ಲಿ ಕೆಲವರು ನಡೆದುಕೊಳ್ಳುತ್ತಿದ್ದಾರೆ ಎಂದರು.
-sanje vani
loading...
No comments