ಸ್ವಂತ ತಂಗಿಯನ್ನೇ ಮಂಚಕ್ಕೆ ಕರೆದ ಕಾಮುಕ ಅಣ್ಣ
ಗದಗ : ಗದಗದಲ್ಲಿ ಸ್ವಂತ ಅಣ್ಣನೇ ತಂಗಿಯ ಮೇಲೆ ಲೈಂಗಿಕ ಕಿರುಕುಳವನ್ನು ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ನೊಂದ ತಂಗಿ ಗದಗ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಫೆಬ್ರವರಿ 28ರಂದೇ ಪ್ರಕರಣ ದಾಖಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
40ವರ್ಷ ವಯಸ್ಸಿನ ಉಮರ್ಸಾಬ್ ನದಾಫ್ ಎಂಬಾತನೇ ಸ್ವಂತ ತಂಗಿಗೆ ಕಿರುಕುಳ ನೀಡಿದ್ದು, ಕಳೆದ ಒಂದು ವರ್ಷದಿಂದ ಹೇಯ ಕೃತ್ಯ ನಡೆಸುತ್ತಿದ್ದ ಎಂದು 35 ವರ್ಷದ ನೊಂದ ಮಹಿಳೆ ಮಾಧ್ಯಮದ ಮುಂದೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಉಮರ್ಸಾಬ್ ಗೆ ಅದಾಗಲೇ ಎರಡು ಮದುವೆಯಾಗಿದ್ದು ಇಬ್ಬರು ಹೆಂಡತಿಯರು ಈತನ ಕಾಟ ತಾಳಲಾರದೆ ತ್ಯಜಿಸಿದ್ದಾರೆ. ಇನ್ನು ಸಂತ್ರಸ್ಥ ಮಹಿಳೆಗೂ ಮದುವೆಯಾಗಿದ್ದು ಗಂಡ ಆಕೆಯನ್ನು ತ್ಯಜಿಸಿದ ಕಾರಣ ಅಣ್ಣನ ಮನೆಯಲ್ಲಿ ವಾಸವಿದ್ದಾರೆ.
ಅಣ್ಣನ ಲೈಂಗಿಕ ಕಿರುಕುಳದಿಂದ ಬೇಸತ್ತ ಸಂತ್ರಸ್ಥ ಮಹಿಳೆ ಅದಾಗಲೇ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು. ಇಷ್ಟೆಲ್ಲ ನಡೆದ ಮೇಲೂ ಅಣ್ಣನ ಕಿರುಕುಳ ಮುಂದುವರೆದ ಕಾರಣ ಮಹಿಳಾ ಸಂಘಗಳ ಸಹಾಯದಿಂದ ಸಂತ್ರಸ್ಥ ಮಹಿಳೆ ಗದಗ ಗ್ರಾಮಾಂತರ ಪೋಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಪೋಲೀಸರು ದೂರು ದಾಖಲಿಸಿಕೊಂಡಿದ್ದು ನಾಪತ್ತೆಯಾಗಿರುವ ಉಮರ್ಸಾಬ್ ಬಂದನಕ್ಕೆ ಬಲೆ ಬೀಸಿದ್ದಾರೆ. ಮಹಿಳೆಗೆ ಜಿಲ್ಲಾ ಆಸ್ಪತ್ರೆಯ ವಿಶೇಷ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
loading...
No comments