Breaking News

ಉತ್ತರಪ್ರದೇಶ ಕಾಂಗ್ರೆಸ್ ಹಿನಾಯ ಸೋಲು ಎಐಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜಿನಾಮೆ ?


ದೆಹಲಿ:- ಮಾ (12)  ದೇಶಗಳಲ್ಲಿ ನೋಟ್ ಬ್ಯಾನ್ ನಂತರದ ಚುನಾವಣೆ ಬಾರಿ ಕುತೂಹಲ ಕೆರಳಿಸಿತು ಅದರಲ್ಲೂ ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷ ಕಾಂಗ್ರೆಸ್ ಗೆ ಇದು ಪ್ರತಿಷ್ಠೆಯ ಪ್ರಶ್ನೆ ಯಾಗಿತ್ತು .

ಇದೀಗ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಗೆ ಬಾರಿ ಮುಖಭಂಗವಾಗಿದೆ . ಕಾರಣ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸ್ವ ಕ್ಷೇತ್ರದಲ್ಲಿ ಒಂದೇ ಒಂದು ಸ್ಥಾನ ಪಡೆಯಲು ವಿಫಲವಾಗಿದೆ ಇದಕ್ಕೆ ದೇಶದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು ಮೋದಿ ಅವರ ವಿರುದ್ಧ ಚುನಾವಣೆ ರಣಕಹಳೆ ಮೊಳಗಿಸಲು ರಾಹುಲ್ ಸ್ಥಾನಕ್ಕೆ ಮೋದಿಗೆ ಪೈಪೋಟಿ ಕೊಡಬಲ್ಲ ವ್ಯಕ್ತಿಯನ್ನು ಆಯ್ಕೆ ಮಾಡಿ ಪಕ್ಷವನ್ನು ಹಾಗೂ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೇ ಎಂದು  ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಅದು ಅಲ್ಲದೆ ರಾಹುಲ್ ಅವರು ಮತಾಡುವಾಗ ಗಂಭೀರವಾಗಿ ಇರಲಿ ಅವರ ಮಾತು ಎಲ್ಲಾ ಕಾರ್ಯಕರ್ತರನ್ನು ನಗೆಪಟಾಲಿಗೆ ಇಡು ಮಾಡುತ್ತಿದ್ದು  ಇದು ಒಂದು ರೀತಿಯಲ್ಲಿ ಬಿಜೆಪಿಗೆ ಪರೋಕ್ಷವಾಗಿ ಪ್ರಚಾರ ಕೊಟ್ಟಂತೆ ಎಂದು  ರಾಹುಲ್ ಸ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದರು ಎಂದು ತಿಳಿದು ಬಂದಿದೆ

ಸದ್ಯ ಚುನಾವಣೆಯಲ್ಲಿ ಸೋಲು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನದ ಹೋಗೆ ಸ್ಟೋಟ ಗೊಂಡಿದ್ದು ಹೈ ಕಮಾಂಡ್  ಇದಕ್ಕೆ ಯಾವ ರೀತಿಯಲ್ಲಿ ಕಾರ್ಯಕರ್ತರ ಮನ ಓಲಿಸುತ್ತದೆ ಅನ್ನುವುದು ಈಗ ಉಳಿದಿರುವ ಪ್ರಶ್ನೆ .

loading...

No comments