ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಕವಿತಾ, ಉಪಮೇಯರ್ ರಜನೀಶ್ ಆಯ್ಕೆ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಪಚ್ಚನಾಡಿ ವಾರ್ಡಿನ ಕವಿತಾ ಸನಿಲ್ ಮತ್ತು ಉಪಮೇಯರ್ ಆಗಿ ದೇರೆಬೈಲ್ ಉತ್ತರ ವಾರ್ಡಿನ ರಜನೀಶ್ ಆಯ್ಕೆಗೊಂಡಿದ್ದಾರೆ.
ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 38 ಮತಗಳನ್ನು ಪಡೆಯುವ ಮೂಲಕ ನೂತನ ಮೇಯರ್ ಆಗಿ ಕವಿತಾ ಸನಿಲ್ ಆಯ್ಕೆಗೊಂಡರು.
ಸ್ಥಾಯಿ ಸಮಿತಿಗಳಿಗೆ ಆಯ್ಕೆ
ಹಣಕಾಸು, ತೆರಿಗೆ ನಿರ್ವಹಣೆ ಸ್ಥಾಯಿ ಸಮಿತಿಗೆ ಬಶೀರ್ ಅಹಮದ್, ಕೆ ಜುಬೈದಾ, ಪ್ರತಿಭಾ ಕುಳಾಯಿ, ಮೀರಾ ಕರ್ಕೇರಾ, ರಾಧಾಕೃಷ್ಣ, ಸುಧೀರ್ ಶೆಟ್ಟಿ, ಪ್ರಕಾಶ್ ಸಾಲ್ಯಾನ್ ಆಯ್ಕೆಗೊಂಡರೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿಗೆ ಅಪ್ಪಿ, ನಾಗವೇಣಿ, ಗುಣಶೇಖರ ಶೆಟ್ಟಿ, ಜಯಂತಿ ಆಚಾರ್, ಎ ಸಿ ವಿನಯರಾಜ್, ಆಶಾ ಡಿಸಿಲ್ವಾ, ದೀಪಕ್ ಪೂಜಾರಿ, ನಗರ ಯೋಜನೆ ಮತ್ತು ಸುಧಾರಣೆ ಸಮಿತಿಗೆ ಅಶೋಕ್ ಶೆಟ್ಟಿ, ಪ್ರವೀಣಚಂದ್ರ ಆಳ್ವ, ಅಬ್ದುಲ್ ರವೂಫ್, ತಿಲಕರಾಜ್, ಹರೀಶ್ ಎಂ ಶೆಟ್ಟಿ, ಕವಿತಾ, ಕೆ ಮುಹಮ್ಮದ್ ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಸಬಿತಾ ಮಿಸ್ಕಿತ್, ಸುಮಯ್ಯಾ, ಶೈಲಜಾ, ರತಿಕಲಾ, ಹೇಮಲತಾ ಸಾಲ್ಯಾನ್, ದಿವಾಕರ್, ಪ್ರಕಾಶ್ ನೇಮಕಗೊಂಡರು.
ಪಾಲಿಕೆಯಲ್ಲಿ 60 ಸದಸ್ಯ ಬಲದಲ್ಲಿ ಕಾಂಗ್ರೆಸ್ಸಿನ 35 ಮಂದಿ ಸದಸ್ಯರಿದ್ದಾರೆ. ಬಿಜೆಪಿ 20, ಜೆಡಿಎಸ್ ಎರಡು ಹಾಗೂ ಸಿಪಿಎಂ, ಎಸ್ ಡಿ ಪಿ ಐ ಮತ್ತು ಪಕ್ಷೇತರರು ತಲಾ ಒಂದು ಸ್ಥಾನವನ್ನು ಅಲಂಕರಿಸಿದ್ದಾರೆ.
k-ale
loading...
No comments