'ಜಾಯ್ ಆಫ್ ಹೋಲಿ' ಡಾಟಾ ಆಫರ್
ಮುಂಬಯಿ: ಅನಿಲ್ ಅಂಬಾನಿ ಅವರ ರಿಲಯನ್ಸ್ ಕಮ್ಯುನಿಕೇಷನ್ಸ್ ಹೋಲಿ ಹಬ್ಬದ ಪ್ರಯುಕ್ತ ಹೊಸ ಆಫರ್ ಪ್ರಕಟಿಸಿದೆ. 'ಜಾಯ್ ಆಫ್ ಹೋಲಿ' ಆಫರ್‌ನಡಿ ತನ್ನ ಹೊಸ 4ಜಿ ಗ್ರಾಹಕರಿಗೆ 49 ರೂ.ಗೆ 1ಜಿಬಿ ಡಾಟಾ, 149 ರೂ.ಗೆ 3ಜಿಬಿ ಡಾಟಾ ಪ್ರಕಟಿಸಿದೆ. ಇದು ಉಚಿತ ಮತ್ತು ಅನ್‌ಲಿಮಿಟೆಡ್ ಲೋಕಲ್ ಹಾಗೂ ಎಸ್‌ಟಿಡಿ ಕರೆಗಳನ್ನು ಕೂಡ ಒಳಗೊಂಡಿದ್ದು, 28 ದಿನಗಳ ವ್ಯಾಲಿಡಿಟಿ ಇದೆ.
3ಜಿ ಮತ್ತು 2ಜಿ ಗ್ರಾಹಕರಿಗೂ ಕಂಪೆನಿಯು ಕ್ರಮವಾಗಿ 99 ರೂ. ಮತ್ತು 49 ರೂ.ಗಳ ಅನ್‌ಲಿಮಿಟೆಡ್ ಡಾಟಾ ಆಫರ್ ನೀಡಿದೆ. ದಿಲ್ಲಿ, ಮುಂಬಯಿ, ಕೋಲ್ಕೊತಾ, ಹಿಮಾಚಲಪ್ರದೇಶ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ , ದಿಲ್ಲಿಗಳಲ್ಲಿ 3 ಜಿ ಹೊಸ ಗ್ರಾಹಕರು ಈಗ 99 ರೂ.ಗೆ ಅನ್‌ಲಿಮಿಟೆಡ್ 3ಜಿ ಡಾಟಾ ಪಡೆದುಕೊಳ್ಳಬಹುದಾಗಿದೆ. ಜತೆಗೆ 20 ರೂ. ಟಾಕ್‌ಟೈಮ್ ಇದೆ. ವಾಯ್ಸ್ ಕಾಲ್‌ವೊಂದಕ್ಕೆ ನಿಮಿಷಕ್ಕೆ 25 ಪೈಸೆ ದರವಿದ್ದು, 28 ದಿನಗಳ ವ್ಯಾಲಿಡಿಟಿ ಇರುತ್ತದೆ ಎಂದು ಸಿಇಒ ಗುರುದೀಪ್ ಸಿಂಗ್ ಹೇಳಿದ್ದಾರೆ.
ಹರಿಯಾಣಾ, ಉತ್ತರಪ್ರದೇಶ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕೇರಳ, ಕರ್ನಾಟಕ, ತಮಿಳುನಾಡು, ಚೆನ್ನೈಗಳಲ್ಲಿ ಹೊಸ 2ಜಿ ಗ್ರಾಹಕರಿಗೆ 49 ರೂ.ಗೆ ಅನ್‌ಲಿಮಿಟೆಡ್ 2ಜಿ ಡಾಟಾ, ಇಪ್ಪತ್ತು ರೂ.ಗಳ ಟಾಕ್ ಟೈಮ್ ಹಾಗೂ ಕಾಲ್‌ಗೆ ನಿಮಿಷಕ್ಕೆ 25 ಪೈಸೆ ದರ ಇರುತ್ತದೆ. 28 ದಿನಗಳ ವ್ಯಾಲಿಡಿಟಿ ಇರುತ್ತದೆ.
loading...
No comments