Breaking News

ಉಡುಪಿ ಮೂಲದ ಮೀನಾಕ್ಷಿ ಪೂಜಾರಿ ಅವರಿಗೆ ಒಲಿದ ಥಾಣೆ ಮೇಯರ್ ಪಟ್ಟ


   
ಸತತ ಮೂರನೇ ಅವಧಿಗೆ ಸ್ಪರ್ಧಿಸಿ ವಿಜೇತ

ಮುಂಬೈ : ಇತ್ತೀಚೆಗೆ ಮುಂಬಯಿ ಉಪನಗರದ ಥಾಣೆ ಮಹಾನಗರ ಪಾಲಿಕೆ(ಟಿಎಂಸಿ)ಗೆ ನಡೆದ ಸ್ಥಳೀಯಾಡಿತ ಚುನಾವಣೆಯಲ್ಲಿ ಥಾಣೆ ಅಲ್ಲಿನ ಮಾನ್ಪಾಡ ಮನೋರಮಾ ನಗರದ 3ಸಿ ವಾರ್ಡಿನಿಂದ ಶಿವಸೇನಾ ಪಕ್ಷದ ಅಭ್ಯರ್ಥಿಯಾಗಿದ್ದು  ಸತತ ಮೂರನೇ ಅವಧಿಗೆ ಸ್ಪರ್ಧಿಸಿ ವಿಜೇತರಾದ ಉಡುಪಿ ಜಿಲ್ಲೆಯ ಕಟಪಾಡಿ ಎಣಗುಡ್ಡೆ ನಿವಾಸಿ ದಿ ಗುರುವ ಕಾಂತಪ್ಪ ಪೂಜಾರಿ ಪುತ್ರಿ ಮೀನಾಕ್ಷಿ (ಗಂಡ ರಾಜೇಂದ್ರ ಶಿಂಧೆ) ಪೂಜಾರಿ ಸೋಮವಾರ ಥಾಣೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಥಾಣೆ ಮಹಾನಗರ ಪಾಲಿಕೆಯ ಒಟ್ಟು 131 ಸ್ಥಾನಗಳಿಗೂ ಮತದಾನ ನಡೆದಿದ್ದು ಶಿವಸೇನೆ ಪಕ್ಷವು 67 ಸ್ಥಾನಗಳಲ್ಲಿ ಜಯಗಳಿತ್ತು. ಎನ್ಸಿಪಿ 34, ಬಿಜೆಪಿ 23, ಕಾಂಗ್ರೆಸ್ 03, ಪಕ್ಷೇತರರು 04 ಸ್ಥಾನಗಳನ್ನು ಪಡೆದಿದ್ದವು.

loading...

No comments