ಎಸ್.ಎಂ. ಕೃಷ್ಣ ಬಿಜೆಪಿಗೆ ಬರುತ್ತಾರೆ ಬಿ ಎಸ್ ವೈ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಬಿಜೆಪಿಗೆ ಆಹ್ವಾನಿಸಿದ್ದಾರೆ.
ಸದಾಶಿವನಗರದ ಕೃಷ್ಣರವರ ನಿವಾಸಕ್ಕೆ ಬಿಜೆಪಿ ಮುಖಂಡರೊಂದಿಗೆ ತೆರಳಿದ ಬಿಎಸ್'ವೈ ಅವರನ್ನು ಎಸ್'ಎಂಕೆ ದಂಪತಿ ಆಹ್ವಾನಿಸಿ ಸೌಜನ್ಯಯುತವಾಗಿ ಮಾತುಕತೆ ನಡೆಸಿದರು. ಆದರೆ ಬಿಜೆಪಿ ಸೇರ್ಪಡೆಯ ಖಚಿತತೆಯ ಬಗ್ಗೆ ಕಾಂಗ್ರೆಸ್ ನಿರ್ಗಮಿತ ಹಿರಿಯ ನಾಯಕ ಸ್ಪಷ್ಟಪಡಿಸಿಲ್ಲ.
ನಂತರ ಮಾತನಾಡಿದ ಬಿಎಸ್'ವೈ'ಎಸ್.ಎಂ. ಕೃಷ್ಣರನ್ನು ಬಿಜೆಪಿಗೆ ಬರುವಂತೆ ಮುಕ್ತಕಂಠದಿಂದ ಆಹ್ವಾನಿಸಿದ್ದೇವೆ.ಶೀಘ್ರದಲ್ಲೇ ಎಸ್.ಎಂ. ಕೃಷ್ಣ ಅವರು ಬಿಜೆಪಿ ಸೇರುವ ವಿಶ್ವಾಸವಿದೆ. ಅವರು ಕೂಡ ಬಿಜೆಪಿ ಕಡೆ ಒಲವು ತೋರಿಸಿದ್ದಾರೆ. ಬಿಜೆಪಿ ಸೇರುವ ಪೂರ್ಣ ವಿಶ್ವಾಸವಿದೆ. ಮುಂದಿನ ವಿಚಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.
ಬಿಜೆಪಿ ಹಿರಿಯ ನಾಯಕ ಆರ್.ಅಶೋಕ್ ಮಾತನಾಡಿ, ಕೃಷ್ಣ ಸೇರ್ಪಡೆಯಾದರೆ ಬಿಜೆಪಿಗೆ ಮತ್ತಷ್ಟು ಶಕ್ತಿ ಬರಲಿದೆ.ಹಳೆ ಮೈಸೂರು ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಶಕ್ತಿ ಹೆಚ್ಚಲಿದೆ ಎಂದು ಹೇಳಿದರು.
loading...
No comments