ಕಲ್ಲು ತೂರಾಟ ಶಂಕಿತ ಆರೋಪಿಗಳಿಬ್ಬರ ಬಂಧನ
ವಿಟ್ಲ : ಹರತಾಳ ದಿನದಂದು ಸರಕಾರಿ ಬಸ್ಸಿಗೆ ಕಲ್ಲೆಸೆದು ಜಖಂಗೊಳಿಸಿದ ಪ್ರಕರಣದ ಶಂಕಿತ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಘ ಪರಿವಾರ ಸಂಘಟನೆಗಳು ಬಂದ್ ಕರೆ ನೀಡಿದ್ದ ಶನಿವಾರದಂದು ಅಡ್ಯನಡ್ಕ ಸಮೀಪದ ಕುದ್ದುಪದವು ಎಂಬಲ್ಲಿ ಸರಕಾರಿ ಬಸ್ಸಿಗೆ ಕಿಡಿಗೇಡಿಗಳು ಕಲ್ಲೆಸೆದು ಜಖಂಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ವೃತ್ತ ಸಿಪಿಐ ಮಂಜಯ್ಯ ನೇತೃತ್ವದ ವಿಟ್ಲ ಪೊಲೀಸರ ತಂಡ ಆರೋಪಿಗಳಿಬ್ಬರನ್ನು ಬಂಧಿಸಿದೆ.
ಕೇಪು ಗ್ರಾಮದ ಅಡ್ಯನಡ್ಕ ಸಮೀಪದ ಪಂಜಿಕಲ್ಲು ನಿವಾಸಿ ಲಕ್ಮಣ ಕುಲಾಲರ ಪುತ್ರ ದಯಾನಂದ (22) ಮತ್ತು ಮಂಜೇಶ್ವರ ಎಣ್ಮಕಜೆ ಗ್ರಾಮದ ಕೂಟೇಲು ನಿವಾಸಿ ದಾಮೋದರ ಮಣಿಯಾಣಿಯ ಪುತ್ರ ಮಂಜುನಾಥ (25) ಎಂಬಿಬ್ಬರು ಪೊಲೀಸರ ಬಲೆಗೆ ಬಿದ್ದ ಆರೋಪಿಗಳು
loading...
No comments