Breaking News

ಸಿಎಂ ಆದ ನಂತರ ಯೋಗಿ ಅವರು ಹೊರಡಿಸಿರುವ ಆದೇಶ ಹೀಗಿದೆ ನೋಡಿ



ಉತ್ತರ ಪ್ರದೇಶ :  ಉತ್ತರ ಪ್ರದೇಶ ಮುಖ್ಯಮಂತ್ರಿ ಆಗಿ ಯೋಗಿ ಆದಿತ್ಯನಾಥ್ ಅವರು ಆಧಿಕಾರ ಸ್ವೀಕರಿಸಿದ ನಂತರ  ರಾಜ್ಯದಲ್ಲಿ  ಕಾನೂನು ಸುವ್ಯವಸ್ಥೆ ಕಾಪಾಡಲು ಆದೇಶದ ಮೇಲೆ ಆದೇಶ ಹೊರಡಿಸಿ ಭ್ರಷ್ಟ ಮತ್ತು ಸಮಾಜ ಘಾತುಕರಿಗೆ ಬಿಸಿ ಮುಟ್ಟಿಸಿದ್ದಾರೆ .

ಸಿಎಂ ಆದ ನಂತರ ಯೋಗಿ ಅವರು ಹೊರಡಿಸಿರುವ ಆದೇಶ ಹೀಗಿದೆ ನೋಡಿ
* ಪುಂಡರನ್ನು ಮಟ್ಟ ಹಾಕಲು ಆ್ಯಂಟಿ-ರೋಮಿಯೋ ಸ್ಕ್ವಾಡ್
* ಮಾನಸ ಸರೋವರ ಯಾತ್ರಿಗಳಿಗೆ 1 ಲಕ್ಷ ರೂ. ಅನುದಾನ,
* ಸರ್ಕಾರಿ ಕಚೇರಿಗಳಲ್ಲಿ ಪಾನ್, ಗುಟ್ಕಾ ನಿಷೇಧ
* ಗೋವುಗಳ ಕಳ್ಳಸಾಗಾಣಿಕೆ ನಿಷೇಧ
* ಅಕ್ರಮ ಕಸಾಯಿಖಾನೆಗಳು ತಕ್ಷಣ ಬಂದ್
* ಸಚಿವರು ಕಚೇರಿ ಫೈಲ್'​ಗಳನ್ನು ಮನೆಗೆ ತೆಗೆದುಕೊಂಡು ಹೋಗಕೂಡದು
* ಅಧಿಕಾರಿಗಳು 15 ದಿನಗಳಲ್ಲಿ ಆಸ್ತಿ ವಿವರ ಸಲ್ಲಿಸಬೇಕು
* ನವರಾತ್ರಿ, ರಾಮನವಮಿಯಂದು 24 ಗಂಟೆ ವಿದ್ಯುತ್ ಸರಬರಾಜು
* ರೋಗಿಗಳ ದೂರು ದಾಖಲಿಸಿಕೊಳ್ಳಲು ಆರೋಗ್ಯ ಇಲಾಖೆಯಿಂದ ಌಪ್
* ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು 14 ದಿನಗಳ ಒಳಗೆ ಹಣ ನೀಡಬೇಕು
* ರೈತರ ಬೆಳೆ ಖರೀದಿಗೆ ಚತ್ತೀಸ್​ಘಡ ಮಾದರಿ ಯೋಜನೆ ರೂಪಿಸಲು ಆದೇಶ
* ಗ್ರಾಮಾಂತರ ಪ್ರದೇಶಗಳಲ್ಲಿ 3 ಸಾವಿರ ಮೆಡಿಕಲ್ ಶಾಪ್​ಗಳ ಆರಂಭಕ್ಕೆ ಆದೇಶ
* ರಾಜ್ಯಾದ್ಯಂತ ಸ್ಥಗಿತಗೊಂಡಿದ್ದ ಎಲ್ಲ ಸಹಕಾರಿ ಸಂಘಗಳ ಪುನಾರಂಭ
* ಪ್ರಧಾನ್​'ಮಂತ್ರಿ ಆವಾಸ್ ಯೋಜನಾ ಜಾರಿಗೆ ಹೊಸ ಇಲಾಖೆ ರಚನೆಗೆ ಆದೇಶ
* ಶಿಕ್ಷಕರು ಶಾಲೆಗಳಲ್ಲಿ ಟೀಶರ್ಟ್ ಧರಿಸಬಾರದು. ಮೊಬೈಲ್ ಫೋನ್ ತರಬಾರದು
* ಪ್ರತಿ ಹಳ್ಳಿಗಳಿಗೂ ರಸ್ತೆ ಸಂಪರ್ಕ ಕಲ್ಪಿಸಲು ಸೂಚನೆ


'ಕಳೆದ ಕೆಲವು ವರ್ಷಗಳಿಂದ ಶಿಥಿಲಗೊಂಡ ರಸ್ತೆ , ಕತ್ತಲಾದರೆ ಮಹಿಳೆಯರು ಹೊರಗೆ ಹೋಗಲು ಹೆದರುವ ಅಸುರಕ್ಷಿತ ರಾಜ್ಯ ಎಂದೆಲ್ಲ ಬಣ್ಣಿಸಲಾಗುತಿರುವ ಉತ್ತರ ಪ್ರದೇಶದ ಚಿತ್ರಣವನ್ನು   ನಾನು ಬದಲಿಸಲಿದ್ದೇನೆ' ಮತ್ತು ಗೂಂಡಾ ಶಕ್ತಿಗಳು, ಮಾಫಿಯಾ, ಕ್ರಿಮಿನಲ್‌ಗಳು ಮತ್ತು ಇತರ ರೌಡಿಗಳಿಗೆ ಆಶ್ರಯ ನೀಡುವವರಿಗೆ ಇಲ್ಲಿ ಜಾಗವಿಲ್ಲ. ಅಂಥವರು ಉತ್ತರ ಪ್ರದೇಶದಿಂದ ಕಾಲು ಕೀಳಲಿ. ಇಲ್ಲದಿದ್ದರೆ ಜೈಲಿನಲ್ಲಿ ಆತಿಥ್ಯ ಖಂಡಿತ' ಎಂದು ಎಂದು ಆದಿತ್ಯನಾಥ್ ಹೇಳಿದ್ದಾರೆ . ಮಹಿಳೆಯರು ಸುರಕ್ಷಿತರಾಗಿರುವ ರಾಜ್ಯವಾಗಿ ಯುಪಿಯನ್ನು ಬದಲಿಸುವುದು ತಮ್ಮ ಗುರಿ ಮುಂದಿನ ಎರಡು ತಿಂಗಳಲ್ಲಿ ರಾಜ್ಯ ಸರಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾನು ತೋರಿಸುತ್ತೇನೆ. ಕೊಳಕನ್ನು ತೊಳೆಯಲು ನನಗೊಂದು ಅವಕಾಶ ಸಿಕ್ಕಿದೆ. ಅದನ್ನು ನಾನು ಮಾಡಿ ತೋರಿಸುತ್ತೇನೆ' ಎಂದು ಆದಿತ್ಯನಾಥ್ ಘೋಷಿಸಿದ್ದಾರೆ
ಏನಾದರೂ ಅಕ್ರಮ ಕಂಡುಬಂದಲ್ಲಿ ಸಂಪೂರ್ಣ ವಿವರದೊಂದಿಗೆ ನನಗೆ ಮೆಸೇಜ್‌ ಮಾಡಿ. ಕ್ರಮ ಕೈಗೊಳ್ಳುವುದನ್ನು ನಾನು ಖಾತ್ರಿಪಡಿಸುತ್ತೇನೆ' ಎಂದು ಸಿಎಂ ಯೋಗಿ ಭರವಸೆ ನೀಡಿದ್ದಾರೆ

loading...

No comments