ಉತ್ತರ ಪ್ರದೇಶ ರಸ್ತೆಗಳನ್ನು ಗುಂಡಿ ಮುಕ್ತವನ್ನಾಗಿಸಲು ಶಪಥ ಮಾಡಿದ ಯೋಗಿ
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಖಡಕ್ ನಿರ್ಧಾರ ತೆಗೆದುಕೊಂಡು, ರಾಜ್ಯದ ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಯೋಗಿ ಆದಿತ್ಯನಾಥ್ ಇದೀಗ ಉತ್ತರ ಪ್ರದೇಶ ರಸ್ತೆಗಳನ್ನು ಗುಂಡಿ ಮುಕ್ತವನ್ನಾಗಿಸಲು ಶಪಥ ಮಾಡಿದ್ದಾರೆ.
ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಕೇಶವ ಪ್ರಸಾದ್ ಮೌರ್ಯ ಅವರ ಉಪಸ್ಥಿತಿಯಲ್ಲಿ ಲೋಕೋಪಯೋಗಿ ಇಲಾಖೆಯೊಂದಿಗೆ ಪರಿಶೀಲನಾ ಸಭೆ ನಡೆಸಿದ ಯೋಗಿ, 'ನಿಗದಿತ ಅವಧಿಯಲ್ಲಿ ಸರಕಾರಿ ಕೆಲಸ ಹಾಗೂ ಯೋಜನೆಗಳನ್ನು ಮುಗಿಸುವುದು ಸರಕಾರದ ಮೊದಲ ಆದ್ಯತೆ. ಇದನ್ನು ಗಮನದಲ್ಲಿಟ್ಟುಕೊಂಡು ಇಲಾಖೆ ಕಾರ್ಯಪ್ರವೃತ್ತವಾಗಬೇಕು,' ಎಂದರು.
'ಅಪರಾಧ ಹಿನ್ನೆಲೆಯುಳ್ಳ, ಕಳಂಕಿತ ಕಾಂಟ್ರಾಕ್ಟರ್‌ಗಳಿಗೆ ಯಾವುದೇ ಕೆಲಸವನ್ನೂ ನೀಡಬಾರದು. ಪ್ರಾಮಾಣಿಕ ಕಾಂಟ್ರಾಕ್ಟರ್‌ಗಳಿಗೆ ಕೆಲಸವನ್ನು ನೀಡಿ, ಉತ್ತಮ ಗುಣಮಟ್ಟದ ಕೆಲಸವಾಗುವಂತೆ ನೋಡಿಕೊಳ್ಳಬೇಕು,' ಎಂದ ಯೋಗಿ, ಪಾರದರ್ಶಕತೆ ಕಾಪಾಡಲು ಹಾಗೂ ಭ್ರಷ್ಟಾಚಾರವನ್ನು ಕಿತ್ತೊಗೊಯಲು ಕೂಡಲೇ ಇ-ಟೆಂಡರಿಂಗ್ ವ್ಯವಸ್ಥೆ ಜಾರಿಗೊಳಿಸಲು ಇಲಾಖೆ ಮುಂದಾಗಬೇಕೆಂದು ಆದೇಶಿಸಿದರು.
loading...
No comments