Breaking News

1000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ‘ಮಹಾಭಾರತ’ ಸಿನಿಮಾನವದೆಹಲಿ : ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಮೊದಲ ಬಾರಿಗೆ,  1000 ಕೋಟಿ ಬಂಡವಾಳದ ಅತೀ ದೊಡ್ಡ ಬಜೆಟ್‌ನಲ್ಲಿ ‘ದಿ ಮಹಾಭಾರತ’ ಚಲನಚಿತ್ರ ತೆರೆಗೆ ಬರಲಿದೆ. ಅರಬ್‌ ಒಕ್ಕೂಟದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಈ ಚಲನಚಿತ್ರದ ನಿರ್ಮಾಪಕರು.ಜಾಹೀರಾತು ಚಿತ್ರಗಳ ನಿರ್ದೇಶಕ ವಿ.ಎ.ಶ್ರೀಕುಮಾರ್‌ ಮೆನನ್‌ ಚಿತ್ರವನ್ನು  ನಿರ್ದೇಶಿಸಲಿದ್ದಾರೆ.

2020ರ ಹೊತ್ತಿಗೆ ರಿಲೀಸ್‌: 2018ರ ಸೆಪ್ಟೆಂಬರ್‌ನಲ್ಲಿ ಆರಂಭಗೊಳ್ಳಲಿರುವ ಚಿತ್ರೀಕರಣ 2020ರ ಹೊತ್ತಿಗೆ ಮುಕ್ತಾಯಗೊಂಡು, ಆ ವೇಳೆಗೆ ಎರಡು ಆವತರಣಿಕೆಯಲ್ಲಿ ರಿಲೀಸ್‌ ಆಗುವ ನಿರೀಕ್ಷೆ ಇದೆ. ಮೊದಲ ಭಾಗ ಬಿಡುಗಡೆಯಾದ 90 ದಿನಗಳ ನಂತರ ಎರಡನೇ ಭಾಗ ಬಿಡುಗಡೆಯಾಗಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್‌, ಹಿಂದಿ ಭಾಷೆಯಲ್ಲಿ ನಿರ್ಮಾಣಗೊಳ್ಳಲಿದ್ದು, ದೇಶದ ಇತರೆ ಹಾಗೂ ವಿದೇಶಿ ಭಾಷೆಗಳಿಗೆ ಡಬ್‌ ಆಗಲಿದೆ.

ಜಾಗತಿಕವಾಗಿ ಹೆಸರು ಮಾಡಿರುವ ಪ್ರಸಿದ್ಧ ತಂತ್ರಜ್ಞರು ಈ ಚಲನಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ. ಜೊತೆಗೆ ಭಾರತೀಯ ಚಿತ್ರರಂಗ ಹಾಗೂ ಹಾಲಿವುಡ್‌ನ ಖ್ಯಾತನಾಮರು ನಟಿಸಲಿದ್ದಾರೆ.ಮಲಯಾಳಂ ಸಾಹಿತಿ ಎಂ.ಟಿ.ವಾಸುದೇವನ್‌ ನಾಯರ್‌ ಅವರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ ‘ರಂಡಾಮುಝಂ’ ಅನ್ನು ಈ ಚಿತ್ರ ಆಧರಿಸಿದೆ.ಭೀಮನ ದೃಷ್ಟಿಕೋನದಿಂದ  ಪೌರಾಣಿಕ ಕತೆಯನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ‘ಚಿತ್ರಕತೆಯನ್ನು ವಾಸುದೇವನ್‌ ನಾಯರ್‌ ಅವರೇ ಬರೆಯಲಿದ್ದಾರೆ


loading...

No comments