Breaking News

1857ರ ದಂಗೆಗೆ ಮೂಲ ಕಾರಣ ಗೋವುಗಳ ಬಗ್ಗೆ ಇದ್ದ ಅಚಲವಾದ ನಂಬಿಕೆ!


ಕೃಷಿಯ ಉದ್ಧೇಶಕ್ಕಾಗಿ ಉಪಯೋಗಿಸುತ್ತಿದ್ದ ಗೋವನ್ನು ಮಾಂಸಕ್ಕಾಗಿ ಕತ್ತರಿಸಿ ತಿನ್ನಲು ಪ್ರಾರಂಭಿಸಿದರೆ ಸಹಜವಾಗಿ ಭಾರತದಲ್ಲಿ ಗೋ ಸಂಪತ್ತು ನಾಶವಾಗುತ್ತದೆ. ಹೀಗೊಂದು ನಿರ್ಣಯವನ್ನು ೧೮ನೇ ಶತಮಾನದಲ್ಲಿ ಆಂಗ್ಲರು ಕೈಗೆತ್ತಿಕೊಂಡರು. ಈ ನಿರ್ಣಯಕ್ಕೆ ಭಾರತದಲ್ಲಿದ್ದ ಬ್ರಿಟೀಷ್ ಅಧಿಕಾರಿಗಳು ಒಪ್ಪಲಿಲ್ಲ. ಜನರ ಭಾವನೆಗಳಿಗೆ ಘಾಸಿಗೊಳಿಸಿ ಅಪಾಯವನ್ನು ಮೈಮೇಲೆ ಎಳೆದು ಹಾಕಿಕೊಳ್ಳಲು ಅಧಿಕಾರಿಗಳು ಸಿದ್ಧರಿರಲಿಲ್ಲ.
ಲಿಯಾನ್ಸ್ ಡೌನ್ ಎಂಬ ಅಧಿಕಾರಿ ಈ ಬಗ್ಗೆ ಆಳವಾದ ಅದ್ಯಯನ ನಡೆಸಿ ರಾಣಿ ವಿಕ್ಟೋರಿಯಾಳಿಗೆ ಒಂದು ಪತ್ರ ಬರೆದಿದ್ದ.ಈ ಪತ್ರದ ಪ್ರತಿ ಈಗಲೂ ಲಭ್ಯವಿದೆ. ಈ ಪತ್ರದಲ್ಲಿ ಅಧಿಕಾರಿ ಇಲ್ಲಿ ಗೋವಿನ ಹತ್ಯೆಯ ವಿರುದ್ಧ ಜನರು ಸಂಘಟಿತಗೊಳ್ಳುತ್ತ
ಿದ್ದಾರೆ ಎಂಬ ಎಚ್ಚರಿಕೆಯ ಮಾತನ್ನು ರಾಣಿಗೆ ಮನವರಿಕೆ ಮಾಡುವ ಕೆಲಸವನ್ನು ಮಾಡಿದ್ದಾನೆ. ಆತನ ಪ್ರಕಾರ ಭಾರತದ ಸುಮಾರು ೭ ಲಕ್ಷ ಗ್ರಾಮಗಳಲ್ಲಿ ಗೋರಕ್ಷಾದಳಗಳು ತಲೆ ಎತ್ತಿದ್ದು ಪ್ರತೀ ಗ್ರಾಮದಲ್ಲಿ ಜಾತಿ ಮತ ಭೇಧ ಮರೆತು ಗೋವಿನ ಹತ್ಯೆಯ ವಿರುದ್ಧ ಜನ ಎಚ್ಚೆತ್ತುಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ಈ ರಿಪೋರ್ಟ್ ಕಂಡು ಕೆಂಡಮಂಡಲವಾದ ಬ್ರಿಟೀಷ್ ರಾಣಿ ಯಾವುದೇ ಕಾರಣಕ್ಕೂ ಗೋಹತ್ಯೆಯನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಕೂಡಲೆ ಪ್ರಮುಖ ನಗರಗಳಲ್ಲಿ ಮತ್ತು ಸೈನಿಕ ಛಾವಣಿಗಳ ಪಕ್ಕದಲ್ಲಿ ಕಸಾಯಿಖಾನೆಗಳನ್ನು ಸ್ಥಾಪಿಸಿ ಈ ಕಸಾಯಿಖಾನೆಗಳಿಗೆ ಕೇವಲ ಮುಸಲ್ಮಾನ ಕಸಾಯಿಗಳನ್ನು ಮಾತ್ರ ನೇಮಕಗೊಳಿಸಿ ಎಂದು ರಾಣಿ ಆಪ್ಪಣೆ ಮಾಡಿದಳು. ಈ ಪತ್ರ ೦೮ ಡಿಸೆಂಬರ್ ೧೮೯೩ರಂದು ಭಾರತ ತಲುಪಿತು.
ಮಹಾರಾಣಿಯ ಷಡ್ಯಂತ್ರವನ್ನು ಜಾರಿಗೊಳಿಸಲು ಈಸ್ಟ್ ಇಂಡಿಯಾ ಕಂಪನಿ ೩೫೦ ಪರವಾನಿಗೆ ಸಹಿತವಾದ ಕಸಾಯಿಖಾನೆಗಳನ್ನು ಭಾರತದಲ್ಲಿ ಪ್ರಾರಂಭಿಸಿತು.ಇಲ್ಲಿಂದ ಪ್ರಾರಂಭವಾಯಿತು ಭಾರತದ ನೆಲದಲ್ಲಿ ಗೋವುಗಳ ಸಾಮೂಹಿಕ ಹತ್ಯೆ..ಬ್ರಿಟೀಷ್ ಅಧಿಕಾರಿಗಳಿಗೆ,ಆಂಗ್ಲ ಸೈನಿಕರಿಗೆ ಮತ್ತು ಆಂಗ್ಲ ಪ್ರಜೆಗಳಿಗೆ ಈ ಕಸಾಯಿಖಾನೆಗಳಿಂದಲೇ ಮಾಂಸ ಸರಬರಾಜು ಪ್ರಾರಂಭವಾಯಿತು. ಈ ಕಸಾಯಿಖಾನೆಗಳ ಅಬ್ಬರ ಎಷ್ಟಿತ್ತು ಎಂದರೆ ೧೯೧೦ರಿಂದ ೧೯೪೦ರ ತನಕ ೧೦ ಕೋಟಿ ಗೋವುಗಳು ಗದ್ದೆಯಿಂದ ಅನಾಮತ್ತಾಗಿ ಆಂಗ್ಲರ ಹೊಟ್ಟೆ ಸೇರಿ ಬಿಟ್ಟವು.
ಬ್ರಿಟೀಷರ ಈ ಅನಾಚಾರದ ವಿರುದ್ಧ ಗ್ರಾಮ ಗ್ರಾಮಗಳಲ್ಲಿ ಆಕ್ರೋಷ ಬುಗಿಲೇಳ ತೊಡಗಿತು. ಈ ಆಕ್ರೋಷದ ತೋಪಿಗೆ ಮೊದಲ ಕಿಡಿ ಹಚ್ಚಿದವನೇ ಮಂಗಲ್ ಪಾಂಡೆ...... ಬ್ಯಾರಕಪುರದ ಸೈನಿಕ ಛಾವಣಿಯಲ್ಲಿ ೧೮೫೭ರ ಮಾರ್ಚ್ ತಿಂಗಳ ೨೯ರಂದು ಮಂಗಲ್ ಪಾಂಡೆ ಬ್ರಿಟೀಷರ ವಿರುದ್ಧ ಬಂಡಾಯದ ಬಾವುಟ ಹಾರಿಸಿದರು. ಆರ್ಯ ಸಮಾಜದ ಕಟ್ಟಾ ಅನುಯಾಯಿಯಾಗಿದ್ದ ಮಂಗಲಪಾಡೆ ಗೋವಿನ ಕೊಬ್ಬು ಸವರಿದ ಗುಂಡುಗಳನ್ನು ಬಂಲಸಲು ವಿರೋಧ ವ್ಯಕ್ತ ಪಡಿಸಿದರು. ಆಗ ತಾನೆ ಬಂಗಾಲ್ ರೆಜಿಮೆಂಟಿಗೆ ಪರಿಚಯಿಸಲಾಗಿದ್ದ ಎನ್ಫಿಲ್ಟ್ ಪಿ ೫೩ ರೈಫಲ್ ತನ್ನ ಮೊದಲ ಬಲಿ ಪಡೆದು ಕೊಂಡಿತು. ದುರಂತವೆಂದರೆ ವಿರೋಧಿಗಳ ಎದೆ ಸೀಳಲು ಬ್ರಿಟೀಷರು ತರಿಸಿದ್ದ ಈ ಭಾರಿ ಬಂದೂಕು ಹ್ಯೂಸನ್ ಎಂಬ ಅಂಗ್ರೇಜಿ ಅಧಿಕಾರಿಯನ್ನು ನೆಲಕ್ಕುರುಳಿಸಿಬಿಟ್ಟಿತು.
ಕ್ರಾಂತಿಯ ಜ್ವಾಲೆ ಹೊತ್ತಿಕೊಂಡಿತು. ಬೇಗಂ ಹಜ್ರತ್ ಮಹಲ್ ಜಾನ್ಸಿ ರಾಣಿ ಲಕ್ಷ್ಮಿ ಬಾಯಿ ತಾತ್ಯಾ ಟೋಪೆ ನಾನಾ ಸಾಹೇಬ ಕುವರ ಸಿಂಹ ನರಗುಂದದ ಬಾಬಾ ಸಾಹೇಬ ನರಸಪ್ಪ ನಾಯಕ ಝೀನತ್ ಮಹಲ್ ಅಜೀಮುಲ್ಲಾ ಖಾನ್ ಖುದಾ ಬಕ್ಷ್ ಗೌಸ್ ಖಾನ್, ಮೊದಲಾಗಿ ಸಾವಿರಾರು ದೇಶಿ ಸಿಪಾಯಿಗಳು ದಂಗೆ ಎದ್ದರು. ಪರಿಣಾಮವಾಗಿ ೧೮೫೭ರ ಕ್ರಾಂತಿ ಭಾರತದ ನೆಲದಲ್ಲಿ ಸುಮಾರು ೩ ಲಕ್ಷ ೩೭ ಸಾವಿರ ಬ್ರಿಟೀಷರ ಹೆಣ ಉರುಳಿಸಿತು. ಈ ಮಹಾನ್ ಕ್ರಾಂತಿಗೆ ಮೂಲಕಾರಣವೇ ಗೋವಿನ ಬಗ್ಗೆ ಇದ್ದ ಅಚಲವಾದ ನಂಬಿಕೆ.ಇದನ್ನು ಹೊರತುಪಡಿಸಿ ಉಳಿದ ಹಲವಾರು ಕಾರಣಗಳಿದ್ದರೂ ೧೮೫೭ರ ದಂಗೆಗೆ ಮೂಲ ಕಾರಣ ದನದ ಕೊಬ್ಬು.!! ಈ ಅಪಾಯದ ಬಗ್ಗೆ ಬ್ರಿಟೀಷರಿಗೆ ಮೊದಲೇ ಅರಿವಿತ್ತು. ೧೮೫೭ ಹೊತ್ತಿಗೆ ಭಾರತದ ಎಲ್ಲಾ ಗ್ರಾಮಗಳಲ್ಲೂ ಗೋರಕ್ಷಾ ಸಮಿತಿ ರಚನೆಯಾಗಿತ್ತು.೧೮೯೩ರಲ್ಲಿ ಇದರ ಬಗ್ಗೆ ಈಸ್ಟ್ ಇಂಡಿಯಾ ಕಂಪನಿಯ ಉನ್ನತ ಅಧಿಕಾರಿಗಳು ಇಂಗ್ಲೆಂಡಿಗೆ ವರದಿಯನ್ನೂ ಮಾಡಿದ್ದರು.
ಆದರೆ ರಾಣಿಗೆ ಇಲ್ಲಿನ ಜನರ ಭಾವನೆಯ ತೀವ್ರತೆ ಅರಿವಾಗಲಿಲ್ಲ.ಬ್ರಿಟೀಷ್ ದಾಖಲೆಗಳ ಪ್ರಕಾರ ೧೮೭೦ರಲ್ಲಿ ಹಿಂದೂ ಮುಸಲ್ಮಾನರು ಒಂದಾಗಿ ಗೋಹತ್ಯೆಯ ವಿರುದ್ಧ ಹೋರಾಟ ಮಾಡಿದ್ದರು. ಮದ್ಯ ಪ್ರದೇಶದ ರಾಟ್ ಮುಸ್ಲೀಮರು ರಾಜಸ್ಥಾನದ ಮೇವ್ ಮುಸ್ಲೀಮರು ಗೋಸಂತತಿಯ ಹತ್ಯೆಯ ವಿರುದ್ಧ ಖಡ್ಗ ಹಿಡಿದು ಹೋರಾಡಿದ ಉದಾಹರಣೆ ಇದೆ. ಕಾಲಕ್ರಮೇಣ ಮುಸಲ್ಮಾನರನ್ನು ಬ್ರಿಟೀಷರು ತಮ್ಮ ತುಷ್ಟೀಕರಣ ನೀತಿಯ ಮೂಲಕ ಹಿಂದೂಗಳ ವಿರುದ್ಧ ಎತ್ತಿ ಕಟ್ಟುವುದರಲ್ಲಿ ಸಫಲರಾದರು. ಎರಡೂ ಸಮುದಾಯಗಳ ಮದ್ಯೆ ಬ್ರಿಟೀಷರು ಬಿತ್ತಿದ ಅಪನಂಬಿಕೆಯ ಬೀಜ ಮುಂದೊಂದು ದಿನ ಇಡೀ ರಾಷ್ಟ್ರವನ್ನೇ ವಿಭಜನೆಯ ಬಲಿವೇಧಿಯಲ್ಲಿ ತಂದು ನಿಲ್ಲಿಸಿತು. ಇದು ಎಲ್ಲರಿಗೂ ತಿಳಿದಿರುವ ಸಂಗತಿ.
1857ರ ದಂಗೆಗೆ ಮೂಲ ಕಾರಣ ಗೋವುಗಳ ಬಗ್ಗೆ ಇದ್ದ ಅಚಲವಾದ ನಂಬಿಕೆ!

No comments