ನೀರು ಪೂರೈಕೆಗೆ ಆಗ್ರಹಿಸಿ ಮನಪಾಗೆ ಮುತ್ತಿಗೆ ಹಾಕಿದ ಡಿವೈಎಫ್‌ಐ
ಮಂಗಳೂರು : ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಿ ಎರಡು ಪಟ್ಟು ಎತ್ತರಕ್ಕೆ ನೀರನ್ನು ನಿಲ್ಲಿಸಿದ್ದರೂ ಎಲ್ಲ ದಿನಗಳಲ್ಲೂ ನೀರು ಪೂರೈಕೆ ಮಾಡಲು ಅಸಾಧ್ಯ ಎಂಬ ಮಂಗಳೂರು ಮಹಾನಗರ ಪಾಲಿಕೆಯ ನಿರ್ಧಾರವನ್ನು ಖಂಡಿಸಿ, ಸಿಪಿಐ(ಎಂ) ಮತ್ತು ಡಿವೈಎಫ್‌ಐ ಮಂಗಳೂರು ನಗರ ದಕ್ಷಿಣ ಸಮಿತಿಗಳ ಆಶ್ರಯದಲ್ಲಿ ನಿನ್ನೆ ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಗೆ ಮುತ್ತಿಗೆ ಹಾಕಿ ೩೨ ಮಂದಿ ಕಾರ್ಯಕರ್ತರು ಬಂಧನಕ್ಕೊಳಗಾದರು.
ಮುತ್ತಿಗೆ ವೇಳೆ ಸಿಪಿಐ(ಎಂ) ಮಂಗಳೂರು ನಗರ ಸಮಿತಿ ಸದಸ್ಯರಾದ ಜಯಂತಿ ಬಿ. ಶೆಟ್ಟಿ, ವಾಸುದೇವ ಉಚ್ಚಿಲ, ಡಿವೈಎಫ್‌ಐ ಜಿಲ್ಲಾ ಸಮಿತಿಯ ಸಂತೋಷ್ ಬಜಾಲ್, ಬಿ. ಕೆ. ಇಮ್ತಿಯಾಜ್, ಸಾಧಿಕ್ ಕಣ್ಣೂರು ಮತ್ತಿತರರು ಭಾಗವಹಿಸಿ ಬಂಧಿನಕ್ಕೊಳಗಾಗಿದ್ದಾರೆ.
loading...
No comments