Breaking News

ಉದ್ಯಮಿಗೆ ಬ್ಲಾಕ್ ಮೇಲ್ ಜನಶ್ರೀ ಸಿಇಒ ಸೆರೆಬೆಂಗಳೂರು : ಉದ್ಯಮಿಯೊಬ್ಬರಿಂದ ೧೦ ಕೋಟಿ ರೂಗಳನ್ನು ಸುಲಿಗೆ ಮಾಡುತ್ತಿದ್ದ “ಜನಶ್ರೀ” ಸುದ್ದಿವಾಹಿನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಲಕ್ಷ್ಮಿಪ್ರಸಾದ್ ವಾಜಪೇಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿಗಳು ಕೊಟ್ಟ ೧೦ ಕೋಟಿ ಹಣವನ್ನು ತೆಗೆದುಕೊಂಡ ಲಕ್ಷ್ಮಿಪ್ರಸಾದ್ ವಾಜಪೇಯಿ ಹಾಗೂ ಅವರ ಸಹಾಯಕ ಮಿಥನ್ ಸೇರಿ ಇಬ್ಬರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಬಂಧಿಸಿದ ಕೋರಮಂಗಲ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಉದ್ಯಮಿ ಇಂಜಾಝ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಸುಹೈಲ್ ಶರೀಫ್ ಮತ್ತು ಮಿಸ್ಬಾಹ್ ಮುಖರ್ರಮ್‌ಗೆ ಉದ್ಯಮದ ವಿರುದ್ದದ ಸುದ್ದಿ ಪ್ರಸಾರ ಮಾಡದಿರಲು ಲಕ್ಷ್ಮಿಪ್ರಸಾದ್ ವಾಜಪೇಯಿ(೪೨) ೧೦ಕೋಟಿ ಹಣದ ಬೇಡಿಕೆಯಿಟ್ಟಿದ್ದರು .ಈ ಸಂಬಂಧ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದರು

loading...

No comments