Breaking News

ಐಎಸ್‌ ನೆಲೆ ಮೇಲೆ ಅಮೆರಿಕ ಬಾಂಬ್‌ ದಾಳಿ



ಜಲಾಲಬಾದ್‌: ಅಮೆರಿಕ ಆಫ್ಘಾನಿಸ್ತಾನದ ನಂಗರ್‌ಹಾರ್‌ ಮೇಲೆ ನಡೆಸಿರುವ ಅತ್ಯಂತ ದೊಡ್ಡ ಸಾಂಪ್ರದಾಯಿಕ ಬಾಂಬ್‌ ದಾಳಿಗೆ ಇಸ್ಲಾಮಿಕ್ ಸ್ಟೇಟ್‌ನ(ಐಎಸ್‌) 36 ಉಗ್ರರು ಬಲಿಯಾಗಿದ್ದಾರೆ ಎಂದು ಆಫ್ಘಾನಿಸ್ತಾನದ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

 ಅಫ್ಘಾನಿಸ್ತಾನ- ಪಾಕಿಸ್ತಾನದ ಗಡಿಭಾಗದಲ್ಲಿರುವ ಗುಹೆಗಳಲ್ಲಿ ಅಡಗಿರುವ ಉಗ್ರರ ಅಡಗುದಾಣ, ಗುಹೆಗಳು ಮತ್ತು ಮನೆಗಳನ್ನು ಟಾರ್ಗೆಟ್ ಮಾಡಿ ಈ ಬಾಂಬ್ ಪ್ರಯೋಗಿಸಲಾಗಿದೆ. 21, 600 ಪೌಂಡ್ ಭಾರದ ನಾನ್ ನ್ಯೂಕ್ಲಿಯರ್ ಬಾಂಬನ್ನು ಎಂಸಿ 130 ಏರ್ ಕ್ರಾಫ್ಟ್ ನಿಂದ ಕೆಳಗೆ ಹಾಕಲಾಯಿತು.

ಈ ಬಾಂಬ್ ಸುಮಾರು 32 ಕಿಲೋಮೀರ್ ವ್ಯಾಪ್ತಿಯಲ್ಲಿ ಬರುವ ಎಲ್ಲವನ್ನು ಸರ್ವನಾಶ ಮಾಡುವ ಶಕ್ತಿಯುಳ್ಳದ್ದಾಗಿದೆ. MOAB ಅಥವಾ Mother of all bombs ಎಂದು ಕರೆಯಲ್ಪಡುವ ಈ ಭಾರಿ ಗಾತ್ರ ಬಾಂಬನ್ನು ಇದೇ ಮೊದಲ ಬಾರಿಗೆ ಅಮೆರಿಕ ಪ್ರಯೋಗಿಸಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರ ನೆಲೆಗಳಾದ ಸುರಂಗ ಮಾರ್ಗಗಳನ್ನು ಧ್ವಂಸಗೊಳಿಸಲು ಇದನ್ನು ಬಳಸಿದ್ದಾರೆ ಎಂಬ ಮಾಹಿತಿಯಿದೆ.

ಯಾವಾಗ ಐಎಸ್‌ಐಎಸ್ ಉಗ್ರರ ಮೇಲೆ ದಾಳಿ ನಡೆಸಿದಾಗಲೂ ಈ ಉಗ್ರರು ಕಡಿದಾದ ಈ ಪರ್ವತ ಪ್ರದೇಶದ ಗುಹೆಗಳಲ್ಲಿ ಅಡಗಿ ಕುಳಿತುಬಿಡುತ್ತಿದುದರಿಂದ ಅವರನ್ನು ಹಿಡಿಯಲು ಅಥವಾ ಅವರ ಮೇಲೆ ದಾಳಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿಯೇ, ಈ ಬಾರಿ ಶಕ್ತಿ ಶಾಲಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ.
loading...

No comments