ಎಸ್‌ಪಿಗೆ ಸಿಎಂ ದಮ್ಕಿ ಪರಮೇಶ್ವರ್ ಸಮರ್ಥನೆ
ಬೆಂಗಳೂರು : ಮಂಡ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ರೆಡ್ಡಿ ಅವರಿಗೆ ಸಿಎಂ ಜೋರು ಮಾಡಿದ್ದು ಸರಿಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಕಪ್ಪು ಬಾವುಟ ತೋರಿಸುವ ಬದಲು ಕಲ್ಲು ಎಸೆದಿದ್ದರೆ ಏನಾಗ್ತಿತ್ತು? ಹೀಗಾಗಿ ಸಿಎಂ ಎಸ್ಪಿಗೆ ಜೋರು ಮಾಡಿದ್ದು ಸರಿ. ಈ ವಿಚಾರದ ಬಗ್ಗೆ ಈಗಾಗಲೇ ಮಂಡ್ಯ ಎಸ್ಪಿ ಬಳಿ ಮಾತನಾಡಿದ್ದೇನೆ. ಅಲ್ಲದೇ ಘಟನೆ ನಡೆದ ಸಂದರ್ಭ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
loading...
No comments