Breaking News

ತ್ರಿವಳಿ ತಲಾಖ್'ಗೆ ಹೆದರಿ ಹಿಂದೂ ಯುವಕ ಜೊತೆ ಸಪ್ತಪದಿ ತುಳಿದ ಮುಸ್ಲಿಂ ಯುವತಿ



ಉತ್ತರಪ್ರದೇಶ : ತ್ರಿವಳಿ ತಲಾಖ್'ಗೆ ಹೆದರಿದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನೊಂದಿಗೆ ಮದುವೆಯಾಗಿರುವ ವಿಚಾರ ತಿಳಿದು ಬಂದಿದೆ. ವಿಧಿ ವಿಧಾನಗಳ ಅನುಸಾರ ನಡೆದ ಈ ಮದುವೆಗೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಹುಡುಗನ ಮೇಲೆ ಹಲ್ಲೆ ನಡೆಸುವ ಯತ್ನವನ್ನೂ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಇಬ್ಬರೂ ಸುರಕ್ಷಿತವಾಗಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯಲ್ಲಿ ನಡೆದಿದ್ದು, ಯುವತಿಯ ಹೆಸರು ಖೈರೂನ್ ಎಂದು ತಿಳಿದು ಬಂದಿದೆ. ಇನ್ನು ಇವರ ಮದುವೆ ಪೊಲೀಸ್ ಭದ್ರತೆಯಲ್ಲಿ ನೆರವೇರಿದ್ದು, ಸ್ಥಳಕ್ಕಾಗಮಿಸಿದ ಮಾಧ್ಯಮದವರಿಗೆ 'ನನಗೆ ತ್ರಿವಳಿ ತಲಾಖ್ ಎಂಬ ಕಾನೂನಿನಿಂದ ತುಂಬಾ ಭಯವಾಗಿತ್ತು. ಹೀಗಾಗಿ ನಾನು ಹಿಂದೂ ಧರ್ಮವನ್ನು ಒಪ್ಪಿಕೊಂಡೆ ಇಲ್ಲಿ ನನ್ನ ಸಂಸದಾರ ಸುರಕ್ಷಿತವಾಗಿರುತ್ತದೆ. ಮುಂದಿನ ಏಳು ಜನ್ಮಗಳಲ್ಲೂ ನನ್ನ ಪತಿ ದೀಪಕ್'ನೊಂದಿಗೆ ಇರುತ್ತೇನೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಮಾರ್ಚ್ 17ರಂದು ಇಬ್ಬರೂ ಊರು ಬಿಟ್ಟು ತೆರಳಿದ್ದರು. ಇದರಿಂದ ಕಂಗಾಲಾದ ಯುವತಿಯ ಪೋಷಕರು ದೀಪಕ್ ವಿರುದ್ಧ ತಮ್ಮ ಮಗಗಳನ್ನು ಅಪಹರಿಸಿದ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಖೈರೂನ್ ಮಮಾರ್ಚ್ 24ರಂದು ತನ್ನ ಹೆಸರನ್ನು ಖುಷ್ಬೂ ಎಂದು ಬದಲಾಯಿಸಿಕೊಂಡಿದ್ದಲ್ಲದೆ, ಮಾರ್ಚ್ 25ರಂದು ದೀಪಕ್'ನೊಂದಿಗೆ ಸಪ್ತಪದಿ ತುಳಿದಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.
-via suvarna news
loading...

No comments