Breaking News

ಚೆನಾನಿ-ನಶ್ರಿ ಅತಿದೊಡ್ಡ ಸುರಂಗ ಮಾರ್ಗ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ


ನವದೆಹಲಿ :  ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಚೆನಾನಿ-ನಶ್ರಿ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು.

ಸುಮಾರು 3000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬೃಹತ್ ಸುರಂಗ ಮಾರ್ಗವನ್ನು ಜಮ್ಮುಕಾಶ್ಮೀರ ರಾಜ್ಯಪಾಲ ಎನ್‌.ಎನ್‌. ವೋರಾ, ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಉಪಸ್ಥಿತಿಯಲ್ಲಿ ಪ್ರಧಾನಿ ಮೋದಿ ಈ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು.


ಉದ್ಘಾಟನೆ ಬಳಿಕ ಸುರಂಗ ಮಾರ್ಗದಲ್ಲಿ ಸ್ವಲ್ಪ ದೂರ ನಡೆದ ಪ್ರಧಾನಿ, ಬಳಿಕ ತೆರೆದ ಜೀಪ್‌ನಲ್ಲಿ ಪಯಣಿಸಿದರು.

ಐದು ವರ್ಷಗಳ ಅವಧಿಯಲ್ಲಿ ನಿರ್ಮಾಣಗೊಂಡ 9.2 ಕಿ.ಮೀ ಉದ್ದದ ಈ ಸುರಂಗ ಮಾರ್ಗಕ್ಕೆ 2,500 ಕೋಟಿ ರೂ ವೆಚ್ಚ ತಗುಲಿದೆ. ಇದು ದೇಶದಲ್ಲೇ ಅತಿದೊಡ್ಡ ಸುರಂಗ ಮಾರ್ಗವೆಂಬ ಖ್ಯಾತಿ ಪಡೆದಿದೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಅಪಾಯಕಾರಿ ಬೆಟ್ಟಗುಡ್ಡಗಳ ಪ್ರಯಾಣ ಇದರಿಂದ ನಿವಾರಣೆಯಾದಂತಾಗಿದೆ. ಉಧಂಪುರ ಮತ್ತು ರಂಬಾನ್ ಜಿಲ್ಲೆಗಳನ್ನು ಈ ಸುರಂಗ ಮಾರ್ಗ ಸಂಪರ್ಕಿಸುತ್ತದೆ.

ಅಲ್ಲದೆ ಎರಡೂವರೆ ಗಂಟೆಗಳ ಪ್ರಯಾಣದ ಅವಧಿ ಕಡಿಮೆಯಾದಂತಾಗಿದೆ. ಈ ಮಾರ್ಗದಲ್ಲಿ ಪ್ರತಿದಿನ ಸಾಗುವ ವಾಹನಗಳು ಬಳಸುವ ಇಂಧನ ವೆಚ್ಚದಲ್ಲಿ ಈ ಸುರಂಗ ಮಾರ್ಗದಿಂದ ಪ್ರತಿದಿನ 27 ಕೋಟಿ ರೂ ಉಳಿತಾಯವಾಗಲಿದೆ.



loading...

No comments