ಇಂಡಿಯನ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಸಿಂಧು
ನವದೆಹಲಿ : ಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಎದುರಾಳಿ ಸ್ಪೈನ್ ನ ಕರೋಲಿನ್ ಮರಿನ್ ವಿರುದ್ಧ ಭರ್ಜರಿ ಜಯ ಗಳಿಸಿ ಟ್ರೋಫಿಗೆ ಮುಡಿಗೇರಿಸಿಕೊಂಡಿದ್ದಾರೆ.
21- 19 ಅಂಕಗಳಿಂದ ಮೊದಲ ಸೆಟ್ ಜಯಿಸಿದ ಬಳಿಕ ಎರಡನೇ ಸೆಟ್ ನಲ್ಲಿ ಸಿಂಧು 4-0 ಅಂತರದಲ್ಲಿ ಆರಂಭಿಕ ಮುನ್ನಡೆಯಲ್ಲಿದ್ದರು. ಆದರೆ ಮರಿನಾ ತೀವ್ರ ಪೈಪೋಟಿಯನ್ನು ನೀಡಿದ್ದು ಸತತವಾಗಿ ವೇಗದ ತಮ್ಮ ಶೈಲಿಯ ಅತಿ ವೇಗದ ಸ್ಮ್ಯಾಶ್ ಗಳನ್ನು ಹೊಡೆಯುವ ಮೂಲಕ ಅಂಕಗಳನ್ನು ಗಳಿಸುವಲ್ಲಿ ಯಶ್ವಸಿಯಾದರು.
loading...
No comments