Breaking News

ಉಪ ಚುನಾವಣೆ ಬಗ್ಗೆ ಪೊಲೀಸ್ ವರದಿ ಹೀಗಿದೆ ನೋಡಿ



ಬೆಂಗಳೂರು :  ಉಪಚುನಾವಣೆ ಸಮರ ಮುಕ್ತಾಯಗೊಂಡಿದ್ದು ಇದೀಗ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಎರಡೂ ಪಕ್ಷಗಳು ತೊಡಗಿವೆ.
ಸರ್ಕಾರಕ್ಕೆ ಉಪಚುನಾವಣೆ ಸಂಬಂಧ ವರದಿ ಸಲ್ಲಿಸಿರುವ ರಾಜ್ಯ ಗುಪ್ತಚರ ದಳ, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಆದರೆ ತುರುಸಿನ ಸ್ಪರ್ಧೆ ಇರಲಿದೆ ಎಂಬ ಒಕ್ಕಣಿಕೆಯ ವರದಿ ನೀಡಿದೆ.
ಇನ್ನು ಕೇಂದ್ರ ಗುಪ್ತಚರ ಸಂಸ್ಥೆ ಹಾಗೂ ಬಿಜೆಪಿ ಬೂತ್ ಮಟ್ಟದ ಏಜೆಂಟ್‌ಗಳ ವರದಿಯಂತೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಆದರೆ ಯಾವ ವರದಿ ನಿಜವಾಗುತ್ತದೆ ಎಂಬುದನ್ನು ಏ.೧೩ರವರೆಗೆ ಕಾದು ನೋಡಲೇ ಬೇಕು.
ಉಪಚುನಾವಣೆ ಫಲಿತಾಂಶ ಹೊರಹೊಮ್ಮುತ್ತಿದ್ದಂತೆ ಆಡಳಿತಾರೂಢ ಪಕ್ಷದಲ್ಲಿ ಬದಲಾವಣೆ ಗಾಳಿ ಬೀಸಲಿದೆ. ಫಲಿತಾಂಶದ ಪರಿಣಾಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿನಲ್ಲಿ ಏರುಪೇರಾಗಬಹುದು. ಕಾಂಗ್ರೆಸ್‌ನಲ್ಲಿ ಕೆಲ ಬದಲಾವಣೆ ಹಾಗೂ ಸಂಪುಟ ವಿಸ್ತರಣೆಯೂ ಖಾತ್ರಿ ಎನ್ನಲಾಗಿದೆ.
ರಾಜ್ಯ ಸರ್ಕಾರ ಅಂದುಕೊಂಡಂತೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಿಸಿದರೆ, ಸಿಎಂ ಸಿದ್ದರಾಮಯ್ಯ ಅವರನ್ನು ಹಿಡಿದು ನಿಲ್ಲಿಸುವವರು ಯಾರೂ ಇರುವುದಿಲ್ಲ. ಆದರೆ, ಇಡೀ ಸರ್ಕಾರವನ್ನು ಚುನಾವಣೆಯಲ್ಲಿ ಬಳಸಿಕೊಂಡ ಬಳಿಕವೂ ಒಂದೊಮ್ಮೆ ಸೋಲು ಕಂಡರೆ ಸಿಎಂ ಹಾಗೂ ಅವರ ತಂಡಕ್ಕೆ ಭಾರಿ ಮುಖಭಂಗವಾಗಲಿದೆ. ಇದರ ನೇರ ಪರಿಣಾಮ ಪಕ್ಷದಲ್ಲಿನ ಆಂತರಿಕ ಕಿತ್ತಾಟದ ಮೇಲಾಗಲಿದೆ.


loading...

No comments