ಕಾರಿನ ಕೆಂಪು ಗೂಟ ತೆಗೆಯಲು ಆದೇಶ ಪ್ರತಿಗೆ ಕಾಯುತ್ತಿರುವ ರೈ
ಮಂಗಳೂರು : ರಾಜ್ಯ ಸರಕಾರದಿಂದ ಆದೇಶದ ಪ್ರತಿ ಬಂದ ಮೇಲೆ ನನ್ನ ಕಾರಿನ ಕೆಂಪು ದೀಪ ತೆಗೆಯುತ್ತೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಕಾರಿನಿಂದ ಕೆಂಪು ದೀಪವನ್ನು ತೆಗೆಯುವುದಕ್ಕೆ ಸಂಬಂಧಿಸಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ಎಲ್ಲಾ ವಿವಿಐಪಿಗಳೂ ಮೇ 1ರಿಂದ ಕೆಂಪು ದೀಪವನ್ನು ಖಡ್ಡಾಯವಾಗಿ ಕಳಚಿಡಬೇಕಾಗಿದೆ. ಇತ್ತೀಚೆಗೆ ಗೃಹ ಸಚಿವ ಪರಮೇಶ್ವರ ಅವರು ಕೂಡಾ ಕೇಂದ್ರ ಸರಕಾರದ ಆದೇಶವಿದ್ದರೂ ಚಿಕ್ಕಮಗಳೂರಿಗೆ ಗೂಟದ ಕಾರಿನಲ್ಲಿ ಭೇಟಿ ನೀಡಿದ್ದರು.
“ಕೇಂದ್ರದಿಂದ ಆದೇಶ ಹೊರಬಿದ್ದಿದ್ದರೂ ಈ ಸುದ್ದಿ ಕೇವಲ ಮಾಧ್ಯಮಗಳಲ್ಲಷ್ಟೇ ಬಂದಿದೆ. ನಾನು ಅಧಿಕೃತ ಆದೇಶದ ಪ್ರತಿ ಬಂದ ಮೇಲೆ ಕಾರಿನಿಂದ ಕೆಂಪು ದೀಪವನ್ನು ತೆಗೆಯುತ್ತೇನೆ”ಎಂದು ಸಚಿವರು ಹೇಳಿದರು.
loading...
No comments