Breaking News

ಸೌಜನ್ಯಾ ಪ್ರಕರಣ ಮರು ತನಿಖೆಗೆ ಹೈ ಕೋರ್ಟ್ ತಡೆ



ಬೆಂಗಳೂರು : ಅಕ್ಟೋಬರ್ 9, 2012ರಲ್ಲಿ ನಡೆದ ಉಜಿರೆ ಎಸ್ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ  ಪ್ರಕರಣದ ತನಿಖೆಯನ್ನು ಸಿಬಿಐ ಮುಂದುವರಿಸಿಕೊಂಡು ಹೋಗುವುದಕ್ಕೆ ಕರ್ನಾಟಕ ಹೈಕೋಟ್ ಮಂಗಳವಾರ ಮತ್ತೆ ತಡೆಯಾಜ್ಞೆ ನೀಡಿದೆ.

ಸಿಬಿಐ ಚಾರ್ಜ್ ಶೀಟಿನಲ್ಲಿ ಸಾಕ್ಷಿಗಳು ಎಂದು ನಮೂದಿತರಾಗಿರುವ ಧೀರಜ್ ಜೈನ್, ಉದಯ್ ಜೈನ್ ಹಾಗೂ ಮಲಿಕ್ ಜೈನ್ ಅವರು ಸಲ್ಲಿಸಿದ ಅಪೀಲಿನ ಮೇಲಿನ ವಿಚಾರಣೆ ನಡೆಸಿ ಜಸ್ಟಿಸ್ ಆನಂದ ಬೈರಾರೆಡ್ಡಿ ತನಿಖೆಗೆ ತಡೆಯಾಜ್ಞೆ ನೀಡಿದ್ದಾರೆ. ಸಿಬಿಐ ಚಾರ್ಜ್ ಶೀಟಿನಲ್ಲಿ ಈಗಾಗಲೇ ಈ ಪ್ರಕರಣದಲ್ಲಿ ಬಂಧಿತನಾಗಿರುವ  ಸಂತೋಷ್ ರಾವ್ ಎಂಬವನನ್ನೇ ಪ್ರಮುಖ ಶಂಕಿತ ಎಂದು ಹೆಸರಿಸಲಾಗಿತ್ತು. ಆದರೆ ಪ್ರಕರಣವನ್ನು ಇನ್ನಷ್ಟು ತನಿಖೆ ನಡೆಸಬೇಕು ಎಂದು ಸೌಜನ್ಯಾ ತಂದೆ  ಸಲ್ಲಿಸಿದ ಅಪೀಲಿನ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರವೂ ತನಿಖೆ ಮುಂದುವರಿಸಿಕೊಂಡು ಹೋಗಲು ಸಿಬಿಐ ವಿಶೇಷ ನ್ಯಾಯಾಲಯ ಇತ್ತೀಚೆಗೆ ಆದೇಶಿಸಿತ್ತು. ಆದರೆ ಹೈಕೋರ್ಟಿಗೆ ಅಪೀಲು ಸಲ್ಲಿಸಿದ್ದ  ಧೀರಜ್ ಉದಯ್ ಹಾಗೂ ಮಲಿಕ್ ಜೈನ್, ಒಮ್ಮೆ ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಮತ್ತೆ ತನಿಖೆಗೆ ಆಸ್ಪದವಿಲ್ಲ ಎಂದು ವಾದಿಸಿದ್ದರು.


loading...

No comments