ಮಕ್ಕಳ ಅನ್ನದಾತೆ ಅಜ್ಜಮ್ಮ ಇನ್ನಿಲ್ಲ
ಉಡುಪಿ: ಎಂಜಿಎಂ ಕಾಲೇಜು ಸಮೀಪದಲ್ಲಿ ಪುಟ್ಟ ಕ್ಯಾಂಟೀನ್ ಇಟ್ಟು ಕಡಿಮೆ ದರದಲ್ಲಿ ಮಕ್ಕಳಿಗೆ ಊಟ ಕೊಡುತ್ತಿದ್ದ ಅಜ್ಜಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಎಂ. ಜಿ .ಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಆಸುಪಾಸಿನ ಜನರಿಗೆ ಚಿರಪರಿಚಿತ ಹೆಸರು ಅಜ್ಜಮ್ಮ . ಸುಮಾರು ೭೦ ವರ್ಷಗಳ ಹಿಂದೆಯೇ ಎಂ.ಜಿ.ಎಂ ಕಾಲೇಜಿನ ಎದುರು ಒಂದು ಸಣ್ಣ ಹೋಟೆಲ್ ಒಂದನ್ನು ನಡೆಸಿಕೊಂಡು ಬಂದವರು ಇವರು. ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಊಟ ಮಾಡಿ ಬಡಿಸ್ತಾ ಇದ್ದ ಇವರನ್ನು ಮಕ್ಕಳು ಪ್ರೀತಿಯಿಂದ ಅಜ್ಜಮ್ಮ ಎಂದು ಕರೆಯುತ್ತಿದ್ದರು. ಅಂದಹಾಗೆ ಇವರೇನು ಸಾಮಾನ್ಯ ಮಹಿಳೆ ಅಲ್ಲ. ಎಷ್ಟೇ ಬೆಲೆ ಏರಿಕೆಯ ಸಂದರ್ಭದಲ್ಲೂ ಕಾಲೇಜಿನ ಮಕ್ಕಳಿಗೆ ಕೇವಲ ೧೫ ರೂಪಾಯಿ ಗೆ ಹೊಟ್ಟೆ ತುಂಬ ಊಟ ಬಡಿಸುತ್ತಾ ಇದ್ದವರು ಇವರು. ವಿಶೇಷ ಅಂದ್ರೆ ಪ್ರತಿ ವರ್ಷ ಆಟಿ ಅಮಾವಾಸ್ಯೆ ಯ ದಿನ ಪಾಲೆ ಮರದ ಕಷಾಯ ತಯಾರಿಸಿ ಊರಿನವರಿಗೆಲ್ಲ ಉಚಿತವಾಗಿ ಹಂಚುತಿದ್ದರು.ಹೋಟೆಲ್ಗೆ ಬಂದವರಿಗೆ ಅಲ್ಲಿ ಬರೀ ಊಟದ ಜೊತೆ ಅಜ್ಜಿಯ ಪ್ರೀತಿಯೂ ಗಿರಾಕಿಗಳಿಗೆ ಸಿಗುತ್ತಿತ್ತು.
ದೇಹದಿಂದ ಜೀವ ಹೋಗುವ ತನಕ ನಾನು ನನ್ನ ಕಾಲಮೇಲೆಯೇ ನಿಂತಿರಬೇಕು. ಯಾರಿಗೂ ಭಾರವಾಗಬಾರದು. ನನ್ನ ಸಂಪಾದನೆಯನ್ನು ನಾನೇ ಮಾಡಬೇಕು ಅಂತ ಸದಾ ಹೇಳುತ್ತಿದ್ದ ಅಜ್ಜಮ್ಮ ಸಾರ್ಥಕ ಜೀವನವನ್ನು ಮುಗಿಸಿದ್ದಾರೆ. ಸಮಾಜಕ್ಕೆ ಆದರ್ಶಮಯ ಉಡುಪಿಯ ಅಜ್ಜಮ್ಮ.
loading...
No comments