Breaking News

ಖ್ಯಾತ ಬಾಲಿವುಡ್ ನಟ ವಿನೋದ್ ಖನ್ನಾ ಇನ್ನಿಲ್ಲಮುಂಬೈ: ಖ್ಯಾತ ಬಾಲಿವುಡ್ ನಟ ಹಾಗೂ ರಾಜಕಾರಣಿ ವಿನೋದ್ ಖನ್ನಾ(70) ವಿಧಿವಶರಾಗಿದ್ದಾರೆ.
ಕೆಲವು ವಾರಗಳ ಹಿಂದೆ ತೀವ್ರ ನಿರ್ಜಲೀಕರಣದ ಕಾರಣ ಖನ್ನಾ ಅವರನ್ನ ಗಿರ್‍ಗಾಂವ್‍ನ ಹೆಚ್‍ಎನ್ ರಿಲಯನ್ಸ್ ಫೌಂಡೇಷನ್ ಅಂಡ್ ರಿಸರ್ಚ್ ಸೆಂಟರ್‍ಗೆ ಕರೆದೊಯ್ಯಲಾಗಿತ್ತು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ಇಂದು ಮುಂಬೈನ ಸರ್‍ಎಚ್‍ಎನ್ ರಿಲಾಯನ್ಸ್ ಫೌಂಡೇಷನ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದರು. ಮೂವರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಖನ್ನಾ ಅಗಲಿದ್ದಾರೆ. 
loading...

No comments