ವಂದೇ ಮಾತರಂ ಹಾಡದವರು ಪೂರ್ವಗ್ರಹ ಪೀಡಿತರು : ಯೋಗಿ
ಲಖನೌ: ವಂದೇ ಮಾತರಂ ಹಾಡುವುದು ಕಡ್ಡಾಯ ಎಂಬ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ, ಇದೊಂದು ಗಂಭೀರ ವಿಷಯ ಎಂದು ಹೇಳಿದ್ದಾರೆ.
ವಂದೇ ಮಾತರಂ ಹಾಡುವುದಿಲ್ಲ ಎಂಬುದು ಗಂಭೀರ ವಿಷಯ. ಅದೇ ವೇಳೆ ವಂದೇ ಮಾತರಂ ಹಾಡುವುದಿಲ್ಲ ಎಂದು ಪಟ್ಟು ಹಿಡಿಯುವುದು ಪೂರ್ವಗ್ರಹ ಪೀಡಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಈ ದೇಶದ ಪ್ರಗತಿಯನ್ನು ನಾವು ಬಯಸುತ್ತಿದ್ದೇವೆ. ಆದರೆ ರಾಷ್ಟ್ರಗೀತೆ ಅಥವಾ ವಂದೇ ಮಾತರಂ ಹಾಡುವುದರ ಬಗ್ಗೆಯೇ ಸಾಕಷ್ಟು ಚರ್ಚೆ ನಡೆಸಲಾಗುತ್ತಿದೆ. ವಂದೇ ಮಾತರಂ ಹಾಡವುದಿಲ್ಲ ಎಂದು ಹೇಳುವುದು ಪೂರ್ವಗ್ರಹ ಪೀಡಿತ ಮನಸ್ಥಿತಿಯನ್ನು ತೋರಿಸುತ್ತಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದಿದ್ದಾರೆ ಆದಿತ್ಯನಾಥ ಯೋಗಿ.
ವಾರದ ಹಿಂದೆಯಷ್ಟೇ ಅಲಹಾಬಾದ್ ನಗರ್ ನಿಗಮದಲ್ಲಿನ ಬಿಜೆಪಿ ಕೌನ್ಸಿಲರ್‍ಗಳನ್ನುದ್ದೇಶಿ ಮಾತನಾಡಿದ ಮೀರತ್ ಮೇಯರ್ ವಂದೇ ಮಾತರಂ ಹಾಡಬೇಕು ಇಲ್ಲದೇ ಇದ್ದರೆ ದೇಶ ಬಿಟ್ಟು ಹೋಗಬಹುದು ಎಂದು ಹೇಳಿದ್ದು ಸಾಕಷ್ಟು ಚರ್ಚೆಗೀಡಾಗಿತ್ತು. ಮೇಯರ್ ಅವರ ಈ ಹೇಳಿಕೆಗೆ ಕೆಲವು ಕೌನ್ಸಿಲರ್‍ಗಳು ಆಕ್ಷೇಪ ವ್ಯಕ್ತ ಪಡಿಸಿದ್ದರು.
-prajavani
loading...
No comments