ಮಹಿಳೆಯರಿಂದ ಯುವಕನ ಮೇಲೆ 3 ದಿನ ಗ್ಯಾಂಗ್ ರೇಪ್
ದಕ್ಷಿಣ ಆಫ್ರಿಕಾ: ಎಲ್ಲಡೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಸುದ್ದಿಯಾದರೆ, ದಕ್ಷಿಣ ಆಫ್ರಿಕಾದಲ್ಲಿ 23ರ ಆಸುಪಾಸಿನ ಯುವಕನ ಮೇಲೆ ಮೂವರು ಮಹಿಳೆಯರು ದಿನಗಳ ಕಾಲ ಅತ್ಯಾಚಾರ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಪ್ರೆಟೋರಿಯಾ ಬಳಿ ಈ ಘಟನೆ ನಡೆದಿದೆ. ಡೈಲಿ ಮೇಲ್ ವರದಿ ಪ್ರಕಾರ, 23 ವರ್ಷದ ಯುವಕ ಟ್ಯಾಕ್ಸಿ ಚಾಲಕನಾಗಿದ್ದು ಟ್ಯಾಕ್ಸಿ ಹತ್ತಿದ ಮಹಿಳೆಯರು ಆತನಿಗೆ ಮತ್ತು ಬರುವ ಪಾನೀಯ ನೀಡಿ ಬಳಿಕ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಸುಮಾರು 72 ಗಂಟೆಗಳ ಕಾಲ ಆ ವ್ಯಕ್ತಿಯನ್ನು ವಶದಲ್ಲಿರಿಸಿಕೊಂಡಿದ್ದ ಯುವತಿಯರು ಆತನ ಮೇಲೆ ಪದೇಪದೆ ಅತ್ಯಾಚಾರ ನಡೆಸಿದ್ದಾರೆ. ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಉಸಿರುಗಟ್ಟಿಸಿ ಸಾಯಿಸುವ ಯತ್ನ ನಡೆಸಿ ನಂತರ ಪರಾರಿಯಾಗಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
'ಯಾವುದೋ ಕೋಣೆಯಲ್ಲಿ ತನ್ನನ್ನು ಕೂಡಿ ಹಾಕಿ ಸಾಮಾಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಯುವಕ ತಿಳಿಸಿದ್ದಾನೆ. ಕೆಲವರ ಬಗ್ಗೆ ಶಂಕೆ ಇದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ' ಎಂದು ಪೊಲೀಸರು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಪುರುಷರ ಮೇಲೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಶೇ.20. ಆದರೆ, ಪುರುಷರ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಪೊಲೀಸರು ಹೆಚ್ಚಿನ ಮನ್ನಣೆ ನೀಡುವುದಿಲ್ಲ ಎಂದು ಅತ್ಯಾಚಾರ ಸಂತ್ರಸ್ಥನೊಬ್ಬ ಹೇಳಿದ್ದಾನೆ.
-toi
No comments