ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿಕೊಂಡಂತೆ ಅಣುಕಿಸಿದ ವ್ಯಕ್ತಿಗೆ ಸುಷ್ಮಾ ಸ್ವರಾಜ್ ಕೊಟ್ಟ ಉತ್ತರವೇನು ಗೊತ್ತೇ
ನವದೆಹಲಿ:‘ಮಂಗಳ ಗ್ರಹದಲ್ಲಿ ಆಹಾರವಿಲ್ಲದೆ ಸಿಕ್ಕಿಹಾಕಿಕೊಂಡಿದ್ದೇನೆ’ ಎಂದು ಮಂಗಳಯಾನ ಯೋಜನೆ ವಿಳಂಬವಾಗುತ್ತಿರುವುದನ್ನು ಟೀಕಿಸಿ ಕರಣ್ ಸೈನಿ ಎಂಬುವವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು. ಇದಕ್ಕೆ ಇಸ್ರೊ ಮತ್ತು ಸುಷ್ಮಾ ಸ್ವರಾಜ್ ಅವರನ್ನು ಟ್ಯಾಗ್ ಮಾಡಿದ್ದರು.ಇದಕ್ಕೆ ವ್ಯಂಗ್ಯವಾಗಿಯೇ ಸುಷ್ಮಾ ಸ್ವರಾಜ್ ಉತ್ತರ ನೀಡಿದ್ದಾರೆ
ನೀವು ವಿದೇಶದಲ್ಲಿದ್ದರೆ ಭಾರತೀಯ ರಾಯಭಾರ ಕಚೇರಿಯು ನಿಮ್ಮ ಸ್ನೇಹಿತನಾಗಿರಲಿದೆ. ಮಂಗಳ ಗ್ರಹದಲ್ಲಿದ್ದರೂ ನೆರವು ನೀಡಲಿದೆ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಸ್ವರಾಜ್ ಅವರ ಪ್ರತಿಕ್ರಿಯೆ ಇದೀಗ ವೈರಲ್ ಆಗಿ ಬಾರಿ ಸದ್ದು ಮಾಡಿದೆ.
No comments