Breaking News

ಬೀಫ್ ಫೆಸ್ಟಿವಲ್ ಕೇರಳ ಯುವ ಕಾಂಗ್ರೆಸಿಗರ ಸೆರೆ


ಕೇರಳ - ಪ್ರಧಾನಮಂತ್ರಿ ನರೇಂದ್ರಮೋದಿ ಕೊಚ್ಚಿಗೆ ಆಗಮಿಸುವ ಮುನ್ನ ದನದ ಮಾಂಸದ ಊಟದ ಉತ್ಸವ ಏರ್ಪಡಿಸಿದ್ದ ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಪ್ರಧಾನಿ ಮೋದಿ ಕೇರಳದ ಪ್ರಥಮ ಮೆಟ್ರೊ ರೈಲು ಉದ್ಘಾಟಿಸಿದ ಸ್ಥಳಕ್ಕೆ ಸಮೀಪದ ಸದರ್ನ್ ಕಮಾಂಡ್ ನೌಕಾಪಡೆ ವಿಮಾನನಿಲ್ದಾಣದ ಬಳಿ ಈ ಮಾಂಸದ ಉತ್ಸವವನ್ನು ಏರ್ಪಡಿಸಲಾಗಿತ್ತು.

ದನದ ಮಾಂಸವನ್ನು ಅಡುಗೆ ಮಾಡಿ ಬಡಿಸುತ್ತಿರುವಾಗಲೇ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಯಿತು. ಕೇಂದ್ರ ಸರ್ಕಾರ ಜಾನುವಾರು ಹತ್ಯೆ ನಿಷೇಧಿಸಿದ ನಂತರ ಕೇರಳದ ಹಲವಾರು ಕಡೆ ಇಂಥ ಪ್ರತಿಭಟನೆಗಳು ನಡೆಯುತ್ತಿದ್ದು, ಇದರ ವಿರುದ್ಧ ರಾಜ್ಯ ವಿಧಾನಸಭೆಯಲ್ಲೂ ನಿರ್ಣಯಕೈಗೊಳ್ಳಲಾಗಿದೆ.

No comments