Breaking News

ಅಕ್ರಮ ಜಾನುವಾರು ಸಾಗಾಟ ಮೂವರು ಪರಾರಿ ವಾಹನ ಮುಟ್ಟುಗೋಲು

ಮಂಗಳೂರು : ಹಿಂಸಾತ್ಮಕ ರೀತಿಯಲ್ಲಿ ಜರ್ಸಿ ದನವನ್ನು ಕಟ್ಟಿ ಹಾಕಿ ಕಾರೊಂದರಲ್ಲಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಕಾರಿನ ಬಳಿಗೆ ಹೋದಾಗ ಮೂವರು ಆರೋಪಿಗಳು ಕಾರು ತೊರೆದು ಪರಾರಿಯಾಗಿದ್ದಾರೆ.

ಗ್ರಾಮಾಂತರ ಠಾಣಾ ಎಸೈ ವೆಂಕಟೇಶ್ ಸಿಬ್ಬಂದಿಯೊಂದಿಗೆ ನಸುಕಿನ ಜಾವ ಅರ್ಕುಳದ ಚೆಕ್ ಪೆÇೀಸ್ಟಿನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಫರಂಗಿಪೇಟೆ ಕಡೆಯಿಂದ ಬರುತ್ತಿದ್ದ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಸ್ವಲ್ಪ ಮುಂದಕ್ಕೆ ಕಾರು ನಿಲ್ಲಿಸಿ, ಮೂವರು ಆರೋಪಿಗಳು ಅದರಿಂದ ಇಳಿದು ಪರಾರಿಯಾಗಿದ್ದಾರೆ. ಕಾರಿನ ಬಳಿಗೆ ಹೋಗಿ ನೋಡಿದಾಗ ಚೆವರಲೇಟ್ ಬೀಟ್ ಕಾರನ್ನು ಆರ್ ಟಿ ಓ ನೊಂದಣಿ ಮಾಡದಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಹಿಂಭಾಗದ ಸೀಟಿನ ಅಡಿಯಲ್ಲಿ ಜರ್ಸಿ ದನದ ಕೈ ಕಾಲುಗಳನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಕಾರು ಬಜ್ಪೆ ಶಾಂತಿಗುಡ್ಡೆ ನಿವಾಸಿ ಮೊಹಮ್ಮದ್ ಮುಸ್ತಾಫ ಎಂಬವರಿಗೆ ಸೇರಿದ್ದೆಂದು ತಿಳಿದುಬಂದಿದೆ.

ಆರೋಪಿಗಳು ದನವನ್ನು ಎಲ್ಲಿಂದಲೊ ಕಳ್ಳತನ ಮಾಡಿಕೊಂಡು ಅಕ್ರಮವಾಗಿ ತುಂಬಿಸಿಕೊಂಡು ಹೋಗುತ್ತಿದ್ದರು ಎನ್ನುವುದು ಖಚಿತಪಟ್ಟಿದೆ. ಸ್ವಾಧೀನಪಡಿಸಿಕೊಂಡ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ಸುಮಾರು 4.25 ಲಕ್ಷ ರೂ. ಪರಾರಿಯಾದ ಮೂವರು ಆರೋಪಿಗಳ ವಿರುದ್ಧ ಹಾಗೂ ಕಾರಿನ ಮಾಲಿಕ ಮೊಹಮ್ಮದ್ ಮುಸ್ತಾಫ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

No comments