Breaking News

ಪ್ರಶಾಂತ್ ಪೂಜಾರಿ ಕೊಲೆ ನ್ಯಾಯಾಲಯಕ್ಕೆ ಶರಣಾಗಿದ್ದ ನಾಲ್ವರು ಆರೋಪಿಗಳ ವಿಚಾರಣೆ



ಮೂಡುಬಿದಿರೆ : ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಇತ್ತೀಚೆಗೆ ಕೋರ್ಟಿಗೆ ಶರಣಾಗಿ ಬಳಿಕ ಪೊಲೀಸ್ ವಶದಲ್ಲಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ಘಟನಾ ಸ್ಥಳಕ್ಕೆ ಕರೆತಂದು ವಿಚಾರಣೆ ನಡೆಸಿದರು.

ಪ್ರಶಾಂತ್ ಪೂಜಾರಿಯನ್ನು ಕಡಿದ ಪ್ರಮುಖ ಆರೋಪಿ ಅಕ್ಬರ್ ವಳಚ್ಚಿಲ್ (30), ಸಿರಾಜ್ ಉಳ್ಳಾಲ್ (28) ಮತ್ತು ಇವರಿಗೆ ಸಹಕರಿಸಿದ್ದ ಅನ್ವರ್ ಬಜಪೆ, ತಾಜುದ್ದೀನ್ ಬಜಪೆ ಇವರನ್ನು ಪೊಲೀಸರು ವಿಚಾರಣೆಗೊಳಪಡಿಸಿದರು.

ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಒಟ್ಟು ೧೮ ಆರೋಪಿಗಳನ್ನು ಪೋಲಿಸರು ಗುರುತಿಸಿದ್ದು, ಈ ಪೈಕಿ ಅಕ್ಬರ್ ವಳಚ್ಚಿಲ್, ಸಿರಾಜ್ ಉಳ್ಳಾಲ್, ಅನ್ವರ್ ಬಜಪೆ ಮತ್ತು ತಾಜುದ್ದೀನ್ ಬಜಪೆ ಕೆಲದಿನಗಳ ಹಿಂದೆ ಮೂಡಬಿದ್ರೆ ನ್ಯಾಯಾಲಯಕ್ಕೆ ಶರಣಾಗಿದ್ದರು. ನ್ಯಾಯಾಲಯಕ್ಕೆ ಶರಣಾದ ನಾಲ್ವರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದ ಸಂದರ್ಭ ಆರೋಪಿಗಳು ಕೃತ್ಯಕ್ಕೆ ಬಳಸಿದ ಬೈಕ್, ಬಟ್ಟೆ, ಮತ್ತಿತರ ವಸ್ತುಗಳನ್ನು ಬೇರೆಡೆ ಅಡಗಿಸಿಟ್ಟಿರುವ ಬಗ್ಗೆ ಬಾಯ್ಬಿಟ್ಟಿದ್ದು, ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ೨೦೧೫ ಅ.೯ರಂದು ಇಲ್ಲಿನ ಹೂವಿನ ವ್ಯಾಪಾರಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ನಡೆದಿತ್ತು.

No comments