Breaking News

ದೇಶದ ರಕ್ಷಣೆಗೆ ಹಿಂಜರಿಯುವುದಿಲ್ಲ : ಮೋದಿ ಗುಡುಗು



ವಾಷಿಂಗ್ಟನ್, ಜೂ.26-ತನ್ನನ್ನು ರಕ್ಷಿಸಿಕೊಳ್ಳಲು ಭಾರತ ಹಿಂದುಮುಂದು ನೋಡುವುದಿಲ್ಲ ಎಂಬುದನ್ನು ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ನಡೆಸಲಾದ ಸರ್ಜಿಕಲ್ ಸ್ಟ್ರೈಕ್ (ನಿರ್ದಿಷ್ಟ ದಾಳಿ) ಒಂದು ಪುರಾವೆಯಾಗಿದೆ ಎಂದು ಸಾರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಕಾರ್ಯಾಚರಣೆಯನ್ನು ವಿಶ್ವದಲ್ಲಿನ ಯಾವುದೇ ರಾಷ್ಟ್ರವು ಪ್ರಶ್ನಿಸಿಲ್ಲ ಎಂದು ಹೇಳಿದ್ದಾರೆ.  ದೇಶ ಮತ್ತು ದೇಶವಾಸಿಗಳ ರಕ್ಷಣೆಗಾಗಿ ಭಾರತವು ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯದು ಎಂದು ಮೋದಿ ಗುಡುಗುವ ಮೂಲಕ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ನಾವು ಶಾಂತಿ ಪ್ರಿಯರು. ವಿನಾಕಾರಣ ಆಕ್ರಮಣ ಮಾಡುವುದರಿಂದ ದೂರು ಇರಬೇಕೆಂಬ ತತ್ವವನ್ನು ಸಾಮಾನ್ಯವಾಗಿ ಅನುಸರಿಸುತ್ತೇವೆ. ಆದರೆ, ನಮ್ಮ ದೇಶದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ಬಂದಾಗ ಅದನ್ನು ರಕ್ಷಿಸಿಕೊಳ್ಳಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ. ಇದನ್ನು ಸರ್ಜಿಕಲ್ ಸ್ಟ್ರೈಕ್ ದೃಢಪಡಿಸಿದೆ ಎಂದು ಹೇಳುವ ಮೂಲಕ ಮೋದಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದರು.

No comments