Breaking News

ಗೋಮಾಂಸ ತಿಂದು ಸಾಹಿತಿಗಳ ಹೆಸರಿಗೆ ಕಳಂಕ ತರುತ್ತಿದ್ದಾರೆ ಭಗವಾನ್ : ಪ್ರತಾಪ್ ಸಿಂಹ


ಬೆಂಗಳೂರು  : ವಿವಾದಾತ್ಮಕ ಬುದ್ದಿ ಜೀವಿ ಕೆ.ಎಸ್. ಭಗವಾನ್ ನಿನ್ನೆ ಮೈಸೂರಿನ ಕಲಾಮಂದಿರದಲ್ಲಿ ಗೋ ಮಾಂಸ ಭಕ್ಷಿಸಿ ವಿವಾದ ಸ್ರಷ್ಟಿಸಿದ್ದರು. ಸರ್ಕಾರಿ ಕಲಾಮಂದಿರದಲ್ಲಿ ಗೋ ಮಾಂಸ ಭಕ್ಷಣೆ ಮಾಡಿದವರ ವಿರುದ್ಧ   ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಮೈಸೂರಿನ ಕಲಾ ಮಂದಿರದಲ್ಲಿ ನಡೆಯುತ್ತಿದ್ದ ಆಹಾರ ಹಕ್ಕು-ವ್ಯಕ್ತಿ ಸ್ವಾತಂತ್ರ್ಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ನಿನ್ನೆ ಗೋಮಾಂಸ ಸೇವಿಸುವ ಮೂಲಕ ಸಾಹಿತಿಗಳು ಸಮಾಜಕ್ಕೆ ಕಳಂಕಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಿ ಆವರಣಗಳಲ್ಲಿ ಮಾಂಸಾಹಾರ ನಿಷೇಧ ಕಾನೂನು ಇದ್ದರೂ ಅದರ ನಡುವೆ ಸಾಹಿತಿಗಳು ಮಾಂಸಾಹಾರ ಸೇವನೆ ಮಾಡಿದ್ದಾರೆ. ಅಲ್ಲದೆ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಅವರು ಸರ್ಕಾರಿ ಸೇವೆಯಲ್ಲಿದ್ದಾರೆ. ಈ ಘಟನೆಯಿಂದ ಕಾನೂನು ಉಲ್ಲಂಘನೆಯಾಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ.

ಘಟನೆ ಸಂಬಂಧ ಪಟ್ಟಂತೆ  ರಾಜ್ಯಪಾಲರಿಗೆ ಮಹೇಶ್ ಚಂದ್ರಗುರು ಅವರನ್ನು ವಜಾ ಮಾಡುವಂತೆ ಮನವಿ ಸಲ್ಲಿಸಲಾಗುವುದು ಮತ್ತು  ಕಾನೂನು ಹೋರಾಟ ಮಾಡಲಾಗುವುದು ಎಂದು ಪ್ರತಾಪ್ ಸಿಂಹ ಹೇಳಿದರು .

No comments