Breaking News

ದೇಶದೆಲ್ಲೆಡೆ ರಂಜಾನ್ ಆಚರಣೆ



ಬೆಂಗಳೂರು : ದೇಶಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮ – ಸಡಗರದಿಂದ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಿದರು.
ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ನಿನ್ನೆಯೇ ರಂಜಾನ್ ಆಚರಿಸಿದ ಮುಸ್ಲಿಂ ಬಾಂಧವರು ಇಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳು ಹಾಗೂ ದೇಶಾದ್ಯಂತ ಹಬ್ಬವನ್ನು ಆಚರಿಸಿದರು.

ಚಾಮರಾಜಪೇಟೆ, ಮಿಲ್ಲರ್ಸ್ ರಸ್ತೆ ಸೇರಿದಂತೆ ವಿವಿಧ ಕಡೆ ಇರುವ ಈದ್ಗಾ ಮೈದಾನಗಳಿಗೆ ಮುಸ್ಲಿಂ ಬಾಂಧವರು ಬೆಳಿಗ್ಗೆಯೇ ಆಗಮಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು

No comments