Breaking News

ಬಾಲಕಿಗೆ ಲೈಂಗಿಕ ಕಿರುಕುಳ:ಆರೋಪಿಗೆ 1 ವರ್ಷ ಜೈಲು ಶಿಕ್ಷೆ



ಕಾರ್ಕಳ : ಒಂಬತ್ತು ತಿಂಗಳ ಹಿಂದೆ ಕಾರ್ಕಳ ತಾಲೂಕಿನ ಗ್ರಾಮವೊಂದರಲ್ಲಿ ೧೩ ವರ್ಷದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯವೆಸಗಿದ ಆರೋಪಿ ಅಪ್ಪು ನಾಯ್ಕ (೫೮) ಅವರಿಗೆ ಉಡುಪಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯವು ಸೋಮವಾರ ಜೈಲು ಶಿಕ್ಷೆ ಪ್ರಕಟಿಸಿದೆ.

ಅಭಿಯೋಜನೆಯ ಪರ ೧೭ ಸಾಕ್ಷಿದಾರರ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ. ವೆಂಕಟೇಶ ನಾಯ್ಕ ಅವರು, ವಾದ-ಪ್ರತಿವಾದಗಳನ್ನು ಆಲಿಸಿ ಪೋಕ್ಸೋ ಕಾಯ್ದೆಯ ಕಲಂ ೮ರ ಪ್ರಕಾರ ೩ ವರ್ಷ ಮತ್ತು ಕಲಂ ೧೨ರ ಪ್ರಕಾರ ೧ ವರ್ಷ ಜೈಲು ಶಿಕ್ಷೆಗೆ ಆದೇಶಿಸಿದ್ದಾರೆ.

ಅಭಿಯೋಜನೆಯ ಪರ ವಿಶೇಷ ಸರಕಾರಿ ಅಭಿಯೋಜಕ (ಪೋಕ್ಸೋ ) ವಿಜಯ ವಾಸು ಪೂಜಾರಿ ಅವರು ವಾದಿಸಿದ್ದರು.

ಘಟನೆಯ ಹಿನ್ನೆಲೆ:

ಬಾಲಕಿಯು ತಾಯಿಯೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದು, ೨೦೧೬ರ ಅ. ೧೨ರ ರಾತ್ರಿ ತಾಯಿ ಹೊರಗಿದ್ದ ಸಂದರ್ಭ ಆರೋಪಿ ಅಪ್ಪು ನಾಯ್ಕ ಮನೆಗೆ ಪ್ರವೇಶಿಸಿ ಬಾಲಕಿಯ ಮೈಯನ್ನು ಮುಟ್ಟಿ ಲೈಂಗಿಕ ಕಿರುಕುಳ, ದೌರ್ಜನ್ಯ ಮಾಡಿದ್ದ. ಇದನ್ನು ಸ್ಥಳೀಯರು ನೋಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಕಾರ್ಕಳ ನಗರ ಪ್ರಭಾರ ಪಿಎಸ್‌ಐ ದಾಮೋದರ್ ಕೆ.ಬಿ. ಅವರು ಆರೋಪಿಯನ್ನು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು.

.

No comments