Breaking News

ಭಾರತದ 14ನೇ ರಾಷ್ಟ್ರಪತಿ ಯಾರು ಅನ್ನೋ ಕುತೂಹಲಕ್ಕೆ ಇಂದು ಸಂಜೆ ತೆರೆ ಬೀಳಲಿದೆ


ನವದೆಹಲಿ :  ಭಾರತದ 14ನೇ ರಾಷ್ಟ್ರಪತಿ ಆಯ್ಕೆಯ ಮತ ಎಣಿಕೆ ಇಂದು ನಡೆಯಲಿದ್ದು, ಸಂಜೆ ವೇಳೆಗೆ ರಾಷ್ಟ್ರಪತಿ ಯಾರು ಅನ್ನೋ ಕುತೂಹಲಕ್ಕೆ ತೆರೆ ಬೀಳಲಿದೆ.ರಾಷ್ಟ್ರಪತಿಯಾಗಿ ಎನ್‍ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಆಯ್ಕೆ ಬಹುತೇಕ ಖಚಿತವಾಗಿದ್ದು, ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು ಆಲ್ಫಬೆಟ್ ಪ್ರಕಾರ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆ 4 ಹಂತದಲ್ಲಿ 8 ರೌಂಡ್‍ಗಳಲ್ಲಿ ನಡೆಯಲಿದೆ. ಗೆದ್ದ ಪ್ರಥಮ ಪ್ರಜೆ ಸೋಮವಾರ ಅಂದ್ರೆ 24ರಂದು ಅಧಿಕಾರಕ್ಕೆ ಏರಲಿದ್ದಾರೆ. ಈಗಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೆಹಲಿಯ 10 ರಾಜಾಜಿ ಮಾರ್ಗ್‍ನಲ್ಲಿ ಇನ್ಮುಂದೆ ವಾಸ್ತವ್ಯ ಹೂಡಲಿದ್ದಾರೆ.

No comments