Breaking News

ಸತತ 17 ವರ್ಷಗಳಿಂದ ಶಿವಲಿಂಗ ತಯಾರಿಸುತ್ತಾ ಇರುವ ಮುಸ್ಲಿಂ ಮಹಿಳೆ

  (File photo)


ಉತ್ತರಪ್ರದೇಶ: ವಾರಣಾಸಿ ನಿವಾಸಿಯಾದ ಆಲಂ ಅರಾ ಎಂಬ ಮಹಿಳೆ ಸುಮಾರು 17 ವರ್ಷಗಳಿಂದ ಶಿವಲಿಂಗವನ್ನು ನಿರ್ಮಿಸಿ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಅರು. ಶಿವಲಿಂಗ ನಿರ್ಮಿಸುವ ಕಲೆಯು ನಮಗೆ ದೇವರು ನೀಡಿದ ಕೊಡುಗೆಯಾಗಿದೆ. ನಾವು ಇಲ್ಲಿ ಯಾರನ್ನೂ ಹಿಂದೂ ಮುಸ್ಲಿಮ್ ಎಂಬ ಭೇಧದಿಂದ ನೋಡುವುದಿಲ್ಲ. ನಾವೆಲ್ಲರೂ ಭಾರತೀಯರಷ್ಟೇ. ನಾನೂ ಇನ್ನೂ ಈ ಕಾಯಕವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.

ಇಷ್ಟು ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿಕೊಂಡರು ಇದುವರೆಗೆ ನಮಗೆ ಹಿಂದು ಮುಸ್ಲಿಂ ಅನ್ನುವ ಬೇದ ಭಾವ ಬಂದಿಲ್ಲ ಮುಂದೆಯೂ ಬರದಿರಲ್ಲಿ ಇಲ್ಲಿ ಹಿಂದು ಮುಸ್ಲಿಂರು ತುಂಬಾ ಅನ್ಯೊಯ್ಯವಾಗಿದ್ದು ಕೆಲವೊಂದು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ನಮ್ಮೊಳಗೆ ಕಂದಕವನ್ನು ನಿರ್ಮಿಸುತ್ತಾ ಇದ್ದಾರೆ ಇದು ಮುಂದಿನ ದಿನಗಳಲ್ಲಿ ದೇಶಕ್ಕೆ ಮಾರಕ ಹಾಗೂ ಯುವ ಜನಾಂಗ ಧರ್ಮದ ಹೆಸರಲ್ಲಿ ಆ ರಾಜಕಾರಣಿಗಳ ಹಾದಿಯಲ್ಲಿ ಸಾಗುತ್ತಾ ಇದ್ದು  ಮುಂದೆ ಇದರಿಂದ ಬಹಳ ದೊಡ್ಡ ಅಪಾಯ ಕಾದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

No comments