Breaking News

ಕಾನೂನು ಚೌಕಟ್ಟಿನಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಯೆ ಮಾಡುತ್ತೆವೆ ಅಮಿತ್ ಷಾ



ದೆಹಲಿ :- ಲೋಕಸಭಾ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ  ಭರವಸೆ ಈಡೇರಿಸಲು ನಾವು ಸಿದ್ದರಾಗಿದ್ದೆವೆ ಬಹುಸಂಖ್ಯಾತ ಹಿಂದುಗಳ ಆರಾಧದೇವರಾದ ಅಯ್ಯೊಧ್ಯೆ ಶೀರಾಮ ಮಂದಿರ ಆದಷ್ಟು ಶೀಘ್ರದಲ್ಲೇ ಮಾತುಕತೆ ಮೂಲಕ ಅಲ್ಲಿ ಇರುವ ಸಮಸ್ಯೆ ಬಗೆಹರಿಸಿ ಕಾನೂನು ರೀತಿಯಲ್ಲಿ ಮಂದಿರ ನಿರ್ಮಾಣ ಮಾಡುತ್ತೆವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ .

ಕಳೆದ ಕೆಲವು ಚುನಾವಣೆಯಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಈ ವಿಷಯ ಇದ್ದರು ಮಂದಿರ ನಿರ್ಮಾಣದ ಗೊಂದಲ ಬಗೆಹರಿಯದ ಕಾರಣ ನಿರ್ಧಾರಕ್ಕೆ ಬರಲಾಗಲಿಲ್ಲ ಅದಕ್ಕಾಗಿ ಈ ಸಂದರ್ಭದಲ್ಲಿ ಕ್ಷಮೆ ಕೊರುತ್ತೆನೆ ಎಂದರು . ಹಾಗೂ ಮಾನ್ಯ ನ್ಯಾಯಲಯ ತಿಳಿಸಿದ ಹಾಗೆ ಪರಸ್ಪರ ಮಾತುಕತೆ ನಡೆಸಿ ಮಂದಿರ ನಿರ್ಮಾಣ ಮಾಡಿಯೆ ಮಾಡುತ್ತೆವೆ ಎಂದು ಭರವಸೆ ನೀಡಿದರು .

ದೇಶದಲ್ಲಿ ಚುನಾವಣೆಯಲ್ಲಿ ಹಲವಾರು ಕೋಟಿ ವ್ಯರ್ಥವಾಗುತ್ತಾ ಇದ್ದು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ಮಾಡುವ ಕುರಿತು ಮಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು .

No comments