ಸೆಮಿಫೈನಲ್ ನಲ್ಲಿ ಕೌರ ಸ್ಪೋಟಕ ಶತಕ ಇಡಿ ತಂಡಕ್ಕೆ ಬಿಸಿಸಿಐ ನೀಡಿದ ಬಂಪರ್ ಕೊಡುಗೆ ಏನು ಗೊತ್ತಾ
ಹೊಸದಿಲ್ಲಿ, ಜು.22: ಮಹಿಳಾ ಕ್ರಿಕೆಟ್ ವಿಶ್ವಕಪ್ 2017 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಭಾರತೀಯ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಬಿಸಿಸಿಐ 50 ಲಕ್ಷ ರೂ. ಬಹುಮಾನ ಘೋಷಿಸಿದೆ.
ಸೆಮಿಫೈನಲ್ಸ್ ನಲ್ಲಿ ಆಸಿಸ್ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿ ಪೈನಲ್ ತಲುಪಿದ ವನಿತೆಯರಿಗೆ ದೇಶದಾದ್ಯಂತ ಅಭಿನಂದನೆಗಳ ಮಹಾಪೂರವೆ ಹರಿದು ಬರುತ್ತಿದ್ದು ಇದಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ ಬಿಸಿಸಿಐ ಕೂಡ ಪೈನಲ್ ತಲುಪಿದ ಭಾರತ ಮಹಿಳಾ ತಂಡಕ್ಕೆ ವಿಶೇಷವಾಗಿ ಗೌರವ ಸಲ್ಲಿಸಿದೆ .
ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಜಯಿಸಿ ಫೈನಲ್ ಪ್ರವೇಶಿಸಿದ ಮಿಥಾಲಿ ರಾಜ್ ನಾಯಕತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಇತರ ಸಹಾಯಕ ಸಿಬ್ಬಂದಿಗೂ 25 ಲಕ್ಷ ರೂ. ನೀಡುವುದಾಗಿ ಬಿಸಿಸಿಐ ಘೋಷಿಸಿದೆ.
No comments