Breaking News

ಉತ್ತರ ಪ್ರದೇಶದ ನಿರುದ್ಯೋಗಿ ಯುವಕರಿಗೆ ಬಂಪರ್ ಕೊಡುಗೆ ನೀಡಿದ ಯೋಗಿ ಆದಿತ್ಯನಾಥ್


ಲಕ್ನೋ : ದೇಶಕ್ಕೀಗ ನಾಲ್ಕರಿಂದ ಐದು ಲಕ್ಷ ನುರಿತ ವಾಹನ ಚಾಲಕರು ಬೇಕಾಗಿದ್ದು ಉತ್ತರ ಪ್ರದೇಶದಿಂದ ಗರಿಷ್ಠ ಸಂಖ್ಯೆಯ ವಾಹನ ಚಾಲಕರನ್ನು ತಯಾರುಗೊಳಿಸಿ ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನಿವಾರಿಸುವ ಪ್ರಯತ್ನದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತೊಡಗಿಕೊಂಡಿದ್ದಾರೆ.
ಉತ್ತರ ಪ್ರದೇಶದ ವಿವಿಧೆಡೆ ಒಟ್ಟು 18 ವಾಹನ ಚಾಲನೆ ತರಬೇತಿ ಕೇಂದ್ರ ಗಳನ್ನು ಸ್ಥಾಪಿಸಲು ಆದಿತ್ಯನಾಥ್‌ ಸರಕಾರ ಅಗತ್ಯವಿರುವ ಭೂಮಿಯನ್ನು ನೀಡಿದೆ. ವಾಹನ ಚಾಲಕರಾಗುವ ಆಸಕ್ತಿ ಹೊಂದಿರುವ ಯಾರು ಬೇಕಾದರೂ ಇಲ್ಲಿಗೆ ಬಂದು ತರಬೇತಿ ಪಡೆದು ಸ್ವಾವಲಂಬಿಗಳಾಗಬಹುದೆಂದು ಆದಿತ್ಯನಾಥ್‌ ಹೇಳಿದ್ದಾರೆ. 
ಇದೇ ವೇಳೆ ಮುಖ್ಯಮಂತ್ರಿ ಆದಿತ್ಯನಾಥ್‌ ಅವರು ರಾಜ್ಯದಲ್ಲಿನ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿನ ತರಬೇತಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಅವುಗಳನ್ನು  ಆನ್‌ಲೈನ್‌ಗೆ ತರಲು ನಿರ್ಧರಿಸಿದ್ದಾರೆ. 
ರಾಜ್ಯದಲ್ಲಿ ಅಧಿಕ ಸಂಖ್ಯೆಯ ಯುವಕ-ಯುವತಿಯರಿಗೆ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆಯ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಆದಿತ್ಯನಾಥ್‌ ಅವರು ಇಂದು ಶನಿವಾರ ಕೇಂದ್ರ ಸಹಾಯಕ ಸಚಿವ ರಾಜೀವ್‌ ಪ್ರತಾಪ್‌ ರೂಡಿ ಅವರೊಡನೆ ಸಭೆ ನಡೆಸಿದ್ದಾರೆ.
Source

No comments