Breaking News

ಮಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆದ್ದರೆ ರುಂಡ ಕತ್ತರಿಸಿಕೊಳ್ಳುವೆಬೆಂಗಳೂರು, ಜು.22: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದರೆ ನನ್ನ ರುಂಡವನ್ನೇ ಕತ್ತರಿಸಿ ಮಾಧ್ಯಮದವರ ಕೈಗೆ ಇಡುತ್ತೇನೆ ಎಂದು ಜೆಡಿಎಸ್ ಬಂಡಾಯ ಶಾಸಕ ಬಿ.ಝೆಡ್.ಝಮೀರ್‌ ಅಹ್ಮದ್‌ಖಾನ್   ಹೇಳಿಕೊಂಡಿದ್ದಾರೆ.

"2005ರಲ್ಲಿ ಚಾಮರಾಜಪೇಟೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಸಂದರ್ಭದಲ್ಲಿ ದೇವೇಗೌಡರು ನನಗಾಗಿ 20 ದಿನಗಳ ಕಾಲ ಪ್ರಚಾರಕಾಗಿ ಇಲ್ಲೇ ಇದ್ದು, ದರಿದ್ರ ನಾರಾಯಣ ರ್ಯಾಲಿ ಆಯೋಜಿಸಿ, ಮನೆ, ಮನೆ, ಬೀದಿ ಬೀದಿಗೆ ತೆರಳಿ ಪ್ರಚಾರ ಮಾಡಿದ್ದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ತಿಳಿಸಿದರು.

ಇನ್ನೂ  ದೇವೇಗೌಡರ ಬಗ್ಗೆ ಹೊಗಳುತ್ತಾ  ನಾನು ದೇವೇಗೌಡರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಅವರ ರಾಜಕೀಯ ಅನುಭವದಷ್ಟು ನನಗೆ ವಯಸ್ಸಾಗಿಲ್ಲ. ನಾನು ಕುಮಾರಸ್ವಾಮಿಗೆ ಏನು ಅನ್ಯಾಯ ಮಾಡಿದ್ದೇನೆ ಅಂತ  ನೇರವಾಗಿ ಕುಮಾರಸ್ವಾಮಿ ಜೊತೆಯೆ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಕೆಂಡಲಮಂಡಲರಾದ  ಝಮಿರ್ ಖಾನ್ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆದ್ದರೆ ನನ್ನ ರುಂಡ ತುಂಡರಿಸಿ ಎಂದು ರಾಜಕೀಯವನ್ನು ರಕ್ತಪಾತದತ ಕೊಂಡೊಯುವ ಮತಾನಾಡಿದ್ದು ಇದೀಗ ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಆಸ್ಪದ ನೀಡಿದೆ .

No comments