ಮೊಬೈಲ್ ಕದ್ದ ಯುವಕನಿಗೆ ಹಿಗ್ಗಮುಗ್ಗ ಥಳಿಸಿ ಬುದ್ದಿ ಕಲಿಸಿದ ಯುವತಿ
ನವದೆಹಲಿ : ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಯುವತಿಯ ಬ್ಯಾಗ್ ನಲ್ಲಿ ಇದ್ದ ಮೊಬೈಲ್ ಕದಿಯಲು ಯತ್ನಿಸಿದ ಕಳ್ಳನ್ನು ಹಿಡಿದು ಸಾರ್ವಜನಿಕರ ಮುಂದೆಯೆ ಹಿಗ್ಗಾ ಮುಗ್ಗಾ ಥಳಿಸಿ ಬುದ್ದಿ ಕಲಿಸಿದ ಘಟನೆ ಶುಕ್ರವಾರ ಸಂಜೆ ದೆಹಲಿಯ ರೋಹಿನಿಯಲ್ಲಿ ಬೆಳಕಿಗೆ ಬಂದಿದೆ
ಇಲ್ಲಿನ ರೋಹಿನಿ ಏರಿಯಾದಲ್ಲಿ ಶುಕ್ರವಾರ ಸಂಜೆ ಯುವತಿಯೋರ್ವಳು ಕೆಲಸ ಮುಗಿಸಿಕೊಂಡು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಳು. ಈ ವೇಳೆ ಮೂವರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಆಕೆಯ ಮೊಬೈಲ್ ಕದಿಯಲು ಯತ್ನಿಸಿದ್ದಾರೆ. ಆಗ ಕೆಚ್ಚೆದೆಯ ಈ ಯುವತಿ ಮೂವರಲ್ಲಿ ಓರ್ವನನ್ನು ಹಿಡಿದು, ಬೈಕ್‌ನಿಂದ ಕೆಳಗೆ ಬೀಳಿಸಿದ್ದಾಳೆ. ಅಲ್ಲದೇ, ಖದೀಮನಿಗೆ ಸರಿಯಾದ ಬುದ್ದಿ ಕಲಿಸಿದ ಯುವತಿ ಹಲವಾರು ಪಂಚ್ ಕೊಟ್ಟಿದ್ದಾಳೆ. ಇದನ್ನು ಗಮನಿಸಿ ರಸ್ತೆಯಲ್ಲಿ ಹಾದುಹೋಗುತ್ತಿದ್ದ ಜನ ಸಹ ಯುವತಿಯ ಸಹಾಯಕ್ಕೆ ಬಂದಿದ್ದಾರೆ.
ಘಟನೆ ಸಂಭಂದ ಯುವತಿ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಬಳಿಕ ಘಟನೆ ಬಗ್ಗೆ ಯುವತಿ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ಯುವತಿಯ ದೂರಿನ ಮೇರೆಗೆ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ಬಂದಿಸಿದ್ದಾರೆ. ಬಂಧಿತರನ್ನು ಸಂದೀಪ್ ಹಾಗೂ ವಿಕ್ರಂ ಮೆಹ್ರಾ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಆರೋಪಿಗಳು ದೆಹಲಿ ನಿವಾಸಿಗಳೇ ಆಗಿದ್ದಾರೆ ಎಂದು ಡಿಸಿಪಿ ರಿಶಿಪಾಲ್ ತಿಳಿಸಿದ್ದಾರೆ.
No comments