Breaking News

ಸಂಘಪರಿವಾರದ ಐವರು ಮುಖಂಡರ ಮೇಲೆ ಸೆಕ್ಷನ್ 307



ಮಂಗಳೂರು :  ಆರೆಸ್ಸೆಸ್ ಮುಖಂಡ ಶರತ್ ಮಡಿವಾಳರವರ ಶವಯಾತ್ರೆಯ ಸಂದರ್ಭ ಬಿ.ಸಿ.ರೋಡ್‌ನಲ್ಲಿ ನಡೆದಿದ್ದ ಕಲ್ಲೆಸೆತ ಮತ್ತು ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಸಂಘಪರಿವಾರದ ಐವರು ಮುಖಂಡರ ಮೇಲೆ ಸೆಕ್ಷನ್ ೩೦೭ರನ್ವಯ ಪ್ರಕರಣ ದಾಖಲಿಸಿದ್ದಾರೆ.
ಶರತ್ ಮಡಿವಾಳರವರ ಶವಯಾತ್ರೆಯ ಸಂಪೂರ್ಣ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಐವರು ಮುಖಂಡರು ಕಲ್ಲುತೂರಾಟಕ್ಕೆ ಪಿತೂರಿ ನಡೆಸಿದ್ದಾರೆಂದು ಪೊಲೀಸರು ಗುಮಾನಿ ವ್ಯಕ್ತಪಡಿಸಿದ್ದಾರೆ. ಸಂಘಪರಿವಾರದ ಮುಖಂಡರಾದ ಸತ್ಯಜಿತ್ ಸುರತ್ಕಲ್ ಮನೆಗೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಸತ್ಯಜಿತ್ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಬಜರಂಗದಳ ಮುಖಂಡರಾದ ಶರಣ್ ಪಂಪ್‌ವೆಲ್, ಮುರಳಿಕೃಷ್ಣ ಹಸಂತಡ್ಕ ಹಾಗೂ ಪ್ರದೀಪ್ ವಿರುದ್ಧ ಸೆಕ್ಷನ್ ೧೪೩, ೧೪೭, ೧೪೮, ೧೪೯, ೧೮೮, ೩೦೮, ೩೫೩, ೪೨೭, ೫೦೪ ಹಾಗೂ ಸೆಕ್ಷನ್ ೨ಎ ಅಡಿಯಲ್ಲಿ ಪ್ರಕರಣ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿದ್ದಾರೆ. ಈ ಐದು ಮಂದಿಯಲ್ಲದೆ ಇತರರು ಎಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಲ್ಲಡ್ಕ ಭಟ್ ಸೇರಿ ೧ ಸಾವಿರ ಮಂದಿ ವಿರುದ್ಧ ಕೇಸ್:
ನಿಷೇಧಾಜ್ಞೆ ಉಲ್ಲಂಘಿಸಿ ಗಲಭೆಗೆ ಪ್ರೇರಣೆ ನೀಡಿದ್ದಾರೆಂದು ಆರೆಸ್‌ಎಸ್ ಮುಖಂಡ ಪ್ರಭಾಕರ ಭಟ್ ಸಹಿತ ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸುನಿಲ್ ಕುಮಾರ್ ಸೇರಿದಂತೆ ಐದು ಮಂದಿಯ ವಿರುದ್ಧ ಸೆಕ್ಷನ್ ೧೪೩, ೧೪೭ ಹಾಗೂ ೧೮೮ರನ್ವಯ ಪ್ರಕರಣವನ್ನು ದಾಖಲಿಸಲಾಗಿದೆ. ಈ ಘಟನೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಮೊದಲ ಆರೋಪಿ ಎಂದು ಗುರುತಿಸಲಾಗಿದೆ. ಇದಲ್ಲದೆ, ಇನ್ನೂ ಒಂದು ಸಾವಿರ ಮಂದಿಯ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

No comments